ಮಂಗಳೂರು : ಮಿಶ್ರ ಸಮರ ಕಲೆಯ ಇಂಡಿಯನ್ ಕಾಂಬಾಟ್ ಸೆಟ್ ಆಕಾಡಮಿ ಘಟಕ ಆರಂಭ
ಮಂಗಳೂರು, ಎ.20: ಮಿಶ್ರ ಸಮರ ಕಲೆಯ(ಮಿಕ್ಸೆಡ್ ಮಾರ್ಷಲ್ ಆರ್ಟ್ಸ್) ಐಸಿಎಸ್ಎ ಎಂದು ಕರೆಯಲಾಗುವ ಇಂಡಿಯನ್ ಕಾಂಬಾಟ್ ಸೆರ್ಟ್ ಅಕಾಡಮಿ ಮಂಗಳೂರಿನಲ್ಲಿ ಆರಂಭವಾಗಲಿದೆ ಎಂದು ಕರ್ನಾಟಕ ರಾಜ್ಯ ಮೌಥಾಯ್ ಅಸೋಸಿಯೇಶ್ ನ ಅಧ್ಯಕ್ಷ ರಾಜಗೋಪಾಲ್ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಭಾರತೀಯ ಮಿಶ್ರ ಮಾರ್ಷಲ್ ಆರ್ಟ್ಸ್ 2011ರಲ್ಲಿ ಪ್ರಾರಂಭವಾದಾಗಿನಿಂದ, ಐಸಿಎಸ್ಎ ದೇಶದಲ್ಲಿ ಮಿಶ್ರ ಮಾರ್ಷಲ್ ಆರ್ಟ್ಸ್ ಕುಸ್ತಿಪಟುಗಳ ನುರಿತ ತಂಡಕ್ಕೆ ಅಡಿಪಾಯ ಹಾಕಿದೆ. ಜಿತೀಶ್ ಬಂಜನ್, ಐಸಿಎಸ್ ಎಯ ಸಂಸ್ಥಾಪಕ ಮತ್ತು ಮುಖ್ಯ ತರಬೇತುದಾರರು ಮತ್ತು ಐಸಿಎಸ್ಎ ಯ ಯಶಸ್ಸಿನ ಹಿಂದೆ ಆಧಾರಸ್ತಂಭವಾಗಿದ್ದಾರೆ ಮತ್ತು ದೇಶದ ಅಗ್ರ ಮಾರ್ಷಲ್ ಆರ್ಟ್ಸ್ ಪಟು ಶ್ಯಾಮಾನಂದ ಮತ್ತು ಕಿಂಟನ್ ಕಸಿನ್ ಡಿಕ್ರೂಜ್ ಅವರು ಎಂಎಫ್ಎನ್ ನಂತಹ ಉನ್ನತ ಮಿಶ್ರ ಸಮರ ಕಲೆಯ ಕೂಟಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ ಎಂದವರು ವಿವರಿಸಿದರು.
ಜಿತೇಶ್ ಬಂಜನ್ ಮಂಗಳೂರಿನಲ್ಲಿ ಜನಿಸಿದವರು. ಅವರು ಆರ್ಥಿಕ ತೊಂದರೆಗಳಿಂದಾಗಿ ತಮ್ಮ ಬಾಲ್ಯದಲ್ಲಿ ಮುಂಬೈಗೆ ತೆರಳಿದರು. ಮತ್ತು ಅವರು 16 ವರ್ಷದವರಾಗಿದ್ದಾಗ ಕಿಕ್ ಬಾಕ್ಸಿಂಗ್‌ನೊಂದಿಗೆ ಮಿಶ್ರ ಮಾರ್ಷಲ್ ಆರ್ಟ್ಸ್ ಅಭ್ಯಸಿಸಿದರು. ಇದೀಗ ಅವರು ನಮ್ಮ ಊರಿನ ನಾಯಕನ ಬಗ್ಗೆ ಹೆಮ್ಮೆಪಡುವ ಸಾಧನೆ ಮಾಡಿದ್ದಾರೆ ಎಂದು ರಾಜಗೋಪಾಲ್ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ ಗೋಪಾಲ್ ರೈ (ಮೌ ಥಾಯ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ) ರವರ ಮಾರ್ಗದರ್ಶನದಲ್ಲಿ ಸಚಿನ್ ರಾಜ್ ರೈ ಮತ್ತು ಬಿಪಿನ್ ರಾಜ್ ರೈ ಮಂಗಳೂರಿನಲ್ಲಿ ತಮ್ಮ ಗುರುಗಳಾದ ಯೋಗಗುರು ಮತ್ತು ಕರಾಟೆ ಮಾಸ್ಟರ್ ಸುರೇಂದ್ರ ಬಿ. ಅವರೊಂದಿಗೆ ಈಗಾಗಲೇ ಸುಸಜ್ಜಿತ ಮತ್ತು ಅತ್ಯಾಧುನಿಕ ಸಲಕರಣೆಗಳನ್ನು ಒಳಗೊಂಡ ಮೈಥಾಯ್ ಜಿಮ್ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಮೈಥಾಯ್ ರಾಷ್ಟ್ರೀಯ ಸ್ಪರ್ಧೆ ಯನ್ನು ಸಂಯೋಜಿಸಿದ್ದು ಈ ಕೂಟದಲ್ಲಿ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುಸ್ತಿ ಪಟುಗಳು ಭಾಗವಹಿಸಿ ಸ್ಮರಣೀಯಗೊಂಡು ಮಂಗಳೂರಿನ ಹೆಸರು ಸೇರಿಕೊಂಡಿದೆ. ಮುಂದಿನ ದಿನಗಳಲ್ಲಿ ಜಿತೇಶ್ರ ಬಂಜನ್ ನಮ್ಮೊಂದಿಗೆ ಸೇರಿಕೊಂಡು ಮಂಗಳೂರಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಶ್ರ ಸಮರ ಕಲೆಯ ಕುಸ್ತಿ ಪಟುಗಳನ್ನು ತಯಾರುಗೊಳಿಸುವಲ್ಲಿ ಶ್ರಮ ವಹಿಸಲಿದ್ದಾರೆ ಎಂದು ಹೇಳಿದರು.
ಜಿತೇಶ್ ಬಂಜನ್ ಅವರ ಸಹೋದರರಾಗಿರುವ ಗೌತಮ್‌ರಾಜ್ ಕುಲಾಲ್ ಅವರು ಮುಖ್ಯವಾಗಿ ಮಿಶ್ರ ಮಾರ್ಷಲ್ ಆರ್ಟ್ಸ್ ಪಟು ವಿಶೇಷ ತರಬೇತಿಯನ್ನು ನೀಡಲು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಐಸಿಎಸ್ಎ ಸಂಸ್ಥಾಪಕ ಜಿತೇಶ್ ಬಂಜನ್, ಐಸ್ ಎಸ್ಎ ಮಂಗಳೂರು ಘಟಕದ ಪ್ರವರ್ತಕ ಸಚಿನ್ ರಾಜ್, ಮಿಶ್ರ ಮಾರ್ಷಲ್ ಆರ್ಟ್ಸ್ ಅಂತಾರಾಷ್ಟ್ರೀಯ ತರಬೇತುದಾರರಾದ ಶ್ಯಾಮ್ ನಂದ, ಕ್ಲಿಂಟನ್ ಡಿಕ್ರೂಝ್ ಉಪಸ್ಥಿತರಿದ್ದರು.