ಮದ್ದಡ್ಕ ಹೆಲ್ಪ್ ಲೈನ್ ವತಿಯಿಂದ ರಮಝಾನ್ ಕಿಟ್ ವಿತರಣೆ
Update: 2022-04-24 10:49 IST
ಬೆಳ್ತಂಗಡಿ; ಮದ್ದಡ್ಕ ಹೆಲ್ಪ್ ಲೈನ್ ವಾಟ್ಸಪ್ ಗ್ರೂಪ್ ವತಿಯಿಂದ ಪವಿತ್ರ ರಮಝನ್ ತಿಂಗಳಲ್ಲಿ ಮದ್ದಡ್ಕ ಜಮಾತಿನ ಬಡ ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಯೂನುಸ್ ಆಮೀನ್, ಉಪಾಧ್ಯಕ್ಷರಾದ ಎಮ್ ಎಚ್ ಅಬೂಬಕರ್, ಲೆಕ್ಕ ಪರಿಶೋಧಕರಾದ ಸಿರಾಜು ಚಿಲಿಂಬಿ, ಹೆಲ್ಪ್ ಲೈನ್ ಅಧ್ಯಕ್ಷರಾದ ಝಹೀರ್ ಬಿನ, ಕಾರ್ಯಕಾರಿ ಸಮಿತಿ ಸದಸ್ಯರಾದ ಸ್ವಾಲಿ ಮದ್ದಡ್ಕ, ಶಂಶುದ್ದೀನ್ ಮಾಸ್ಟರ್, ರಿಯಾಝ್ ಸಬರಬೈಲ್, ಇಲ್ಯಾಸ್ ಚಿಲಿಂಬಿ, ಹಿರಿಯರಾದ ಹುಸನಬ್ಬ ಚಿಲಿಂಬಿ, ಖಾದರ್ ಸುಲ್ತಾನ್ ಗುರಿ ಉಪಸ್ಥಿತರಿದ್ದರು.