ಉಡುಪಿ; ಮದ್ರಸ ಪರೀಕ್ಷೆಯಲ್ಲಿ ಫಾತಿಮತ್ ಅಮ್ನ ಸಾಧನೆ
Update: 2022-04-24 14:50 IST
ಉಡುಪಿ, ಎ.೨೪: ಸುನ್ನೀ ಜಂ ಇಯ್ಯತ್ತುಲ್ ಮುಅಲ್ಲಿಮೀನ್ ಉಚ್ಚಿಲ ರೇಂಜ್‌ಗೆ ಒಳಪಟ್ಟ ಕೊಪ್ಪಲಂಗಡಿಯ ನೂರುಲ್ ಹುದಾ ಮದ್ರಸದ ವಿದ್ಯಾರ್ಥಿನಿ ಫಾತಿಮತ್ ಅಮ್ನ ಬಿ.ಎಂ. ಐದನೇ ತರಗತಿಯ ಪಬ್ಲಿಕ್ ಪರೀಕ್ಷೆ ಯಲ್ಲಿ ೬೦೦ರಲ್ಲಿ ೫೩೩ ಅಂಕ ಗಳಿಸುವ ಮೂಲಕ ಉಚ್ಚಿಲ ರೇಂಜ್ ಮಟ್ಟದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಈಕೆ ಅಬ್ದುಲ್ ಬಾರಿ ಉಸ್ತಾದ್ ಕೊಪ್ಪಲಂಗಡಿ ಇವರ ಶಿಷ್ಯೆ ಹಾಗೂ ಬಶೀರ್ ಎಂ. ಮತ್ತು ಅಸ್ಮಾ ಎಂ. ದಂಪತಿ ಪುತ್ರಿ.