ಇಡ್ಕಿದು - ಕೋಲ್ಪೆ ಬದ್ರಿಯಾ ಮದ್ರಸಕ್ಕೆ 100 ಶೇ. ಫಲಿತಾಂಶ. ಇಬ್ಬರು ರೇಂಜ್ ನಲ್ಲಿ ಪ್ರಥಮ

Update: 2022-04-25 07:34 GMT

ವಿಟ್ಲ, ಎ.25: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾದ ಅಧೀನದಲ್ಲಿ ನಡೆದ 5,7 ಮತ್ತು 10ನೇ ತರಗತಿಗೆ ನಡೆದ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಇಡ್ಕಿದು- ಕೋಲ್ಪೆಯ ಬದ್ರಿಯಾ ಮದ್ರಸ ಶೇ.100 ಫಲಿತಾಂಶ ದಾಖಲಿಸಿಕೊಂಡಿದ್ದು, ಇಬ್ಬರು ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸೇರಿದಂತೆ ನಾಲ್ವರು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.

 ಐದನೇ ತರಗತಿಯಲ್ಲಿ ಪರೀಕ್ಷೆ ಬರೆದ 9 ವಿದ್ಯಾರ್ಥಿಗಳ ಪೈಕಿ ಶಹೀಮ್ ಅಹ್ಮದ್ ಡಿಸ್ಟಿಂಕ್ಷನ್ ಜೊತೆಗೆ ರೇಂಜ್ ನಲ್ಲಿ ಪ್ರಥಮ, 6 ವಿದ್ಯಾರ್ಥಿಗಳು ಪ್ರಥಮ ದರ್ಜೆ, 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಏಳನೇ ತರಗತಿಯ 9 ವಿದ್ಯಾರ್ಥಿಗಳ ಪೈಕಿ ನಾಸಿಮ್ ಅಬೂಬಕರ್ ಡಿಸ್ಟಿಂಕ್ಷನ್ ಜೊತೆಗೆ ರೇಂಜ್ ನಲ್ಲಿ ಪ್ರಥಮ, ನಾಲ್ವರು ವಿದ್ಯಾರ್ಥಿಗಳು ಪ್ರಥಮ ದರ್ಜೆ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಹತ್ತನೇ ತರಗತಿಯ 3 ವಿದ್ಯಾರ್ಥಿಗಳ ಪೈಕಿ ಹಾಶಿಮ್ ಅಹ್ಮದ್ ಹಾಗೂ ಆಯಿಷತ್ ಸನಾ ಶೇ.94 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದು, ಓರ್ವ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲೂ ಉತ್ತೀರ್ಣರಾಗಿದ್ದಾರೆ ಎಂದು ಮದ್ರಸ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News