ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಸ್ ಪಟ್ಟಿಯಲ್ಲಿ ವಾರನ್ ಬಫೆಟ್ ಹಿಂದಿಕ್ಕಿದ ಅದಾನಿಗೆ 5ನೇ ಸ್ಥಾನ

Update: 2022-04-25 16:17 GMT

ಹೊಸದಿಲ್ಲಿ: ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಅವರು  ವಾಲ್ ಸ್ಟ್ರೀಟ್ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಜಗತ್ತಿನ ಐದನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆಂದು ಫೋರ್ಬ್ಸ್ ರಿಯಲ್-ಟೈಮ್ ಬಿಲಿಯನೇರ್ಸ್ ಪಟ್ಟಿ ತಿಳಿಸಿದೆ.

ಅದಾನಿ ಮತ್ತವರ ಕುಟುಂಬದ ಒಟ್ಟು ಸಂಪತ್ತು ಇಂದು 123.2 ಬಿಲಿಯನ್ ಡಾಲರ್ ಆಗಿದ್ದು ಬಫೆಟ್ ಅವರ ಒಟ್ಟು ಸಂಪತ್ತಿನ ಮೌಲ್ಯ 121.7 ಬಿಲಿಯನ್ ಡಾಲರ್ ಆಗಿದೆ.

ಫೋರ್ಬ್ಸ್ ಪಟ್ಟಿಯಲ್ಲಿ ಪ್ರಸ್ತುತ ಸ್ಪೇಸ್‍ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಮೊದಲ ಸ್ಥಾನದಲ್ಲಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ 269.7 ಬಿಲಿಯನ್ ಡಾಲರ್ ಆಗಿದೆ. ಅವರ ನಂತರದ ಸ್ಥಾನ ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ (170.2 ಬಿಲಿಯನ್ ಡಾಲರ್) ಅವರದ್ದಾಗಿದ್ದು ಎಲ್‍ವಿಎಂಎಚ್ ಸ್ಥಾಪಕ ಬರ್ನಾರ್ಡ್ ಅರ್ನಾಲ್ಟ್ ಮತ್ತು ಅವರ ಕುಟುಂಬದ ಒಟ್ಟು ಸಂಪತ್ತಿನ ಮೌಲ್ಯ 166.8 ಬಿಲಿಯನ್ ಡಾಲರ್ ಆಗಿದೆ. ಇವರ ನಂತರದ ಸ್ಥಾನ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ (130.2 ಬಿಲಿಯನ್ ಡಾಲರ್) ಅವರದ್ದಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಎಂಟನೇ ಸ್ಥಾನದಲ್ಲಿದ್ದು ಅವರ ಒಟ್ಟು ಸಂಪತ್ತಿನ ಮೌಲ್ಯ 104.2 ಬಿಲಿಯನ್ ಡಾಲರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News