×
Ad

28ರಂದು ‘ರೋಟರಿ ವಂದನಾ ಪ್ರಶಸ್ತಿ’ ಪ್ರದಾನ ಸಮಾರಂ

Update: 2022-04-25 22:07 IST

ಮಂಗಳೂರು, ಎ.25: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ‘ರೋಟರಿ ವಂದನಾ ಪ್ರಶಸ್ತಿ’ ಪ್ರದಾನ ಸಮಾರಂಭ ಎ.28ರಂದು ರಾತ್ರಿ 8 ಗಂಟೆಗೆ ಕದ್ರಿಯಲ್ಲಿರುವ ಕೆನರಾ ಕ್ಲಬ್‌ನಲ್ಲಿ ನಡೆಯಲಿದೆ ಎಂದು ವಂದನಾ ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ರೊ. ಡಾ. ಬಿ. ದೇವದಾಸ್ ರೈ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಚಲನಚಿತ್ರ ನಟರಾದ ಭೋಜರಾಜ ವಾಮಂಜೂರು ಮತ್ತು ಅರವಿಂದ ಬೋಳಾರ್ ಅವರನ್ನು 2022ರ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರಶಸ್ತಿ ಪ್ರದಾನ ಮಾಡುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ರಾಮಶೇಷ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ 3182 ಸೆಂಟ್ರಲ್ ಗವರ್ನರ್ ರಾಘವೇಂದ್ರ, ರೊಟರ್ಯಾಕ್ಟ್ ಸಂಸ್ಥೆಯ ಜಿಲ್ಲಾ ಪ್ರತಿನಿಧಿ ಡೆರಿಲ್ ಡಿಸೋಜಾ, ರೊಟರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷ ನಿಶಾನ್ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ವಿ. ಮಲ್ಯ, ರಾಮಶೇಷ ಶೆಟ್ಟಿ, ನಿಶಾನ್ ಎನ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News