ಮೂರನೇ ಮಹಾಯುದ್ಧದ ಅಪಾಯ ನಿಜ : ರಷ್ಯಾ ವಿದೇಶಾಂಗ ಸಚಿವ

Update: 2022-04-26 02:39 GMT
ಸಾಂದರ್ಭಿಕ ಚಿತ್ರ

ಮಾಸ್ಕೊ: ಉಕ್ರೇನ್ ಜತೆಗಿನ ಶಾಂತಿ ಮಾತುಕತೆಗಳು ಮುಂದುವರಿಯಲಿವೆ; ಆದರೆ ಮೂರನೇ ಜಾಗತಿಕ ಸಮರದ "ನೈಜ" ಅಪಾಯ ಇದೆ ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗಿ ಲರ್ವೋವ್ ಎಚ್ಚರಿಕೆ ನೀಡಿದ್ದಾರೆ.

ಶಾಂತಿ ಮಾತುಕತೆಗಳ ಬಗೆಗಿನ ಉಕ್ರೇನ್ ದೃಷ್ಟಿಕೋನವನ್ನು ಕಟುವಾಗಿ ಟೀಕಿಸಿದ ಅವರು, "ಸದ್ಭಾವನೆಗೆ ಒಂದು ಮಿತಿ ಇದೆ. ಆದರೆ ಇದು ಪರಸ್ಪರ ಆಗಿರದಿದ್ದರೆ, ಸಂಧಾನ ಪ್ರಕ್ರಿಯೆಯಲ್ಲಿ ಅದು ನೆರವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ರಷ್ಯನ್ ಸುದ್ದಿಸಂಸ್ಥೆಗಳ ಜತೆ ಮಾತನಾಡಿದ ಅವರು, "ಆದಾಗ್ಯೂ ನಾವು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ನಿಯೋಜಿಸಿದ ಉಕ್ರೇನ್ ತಂಡದ ಜತೆ ಮಾತುಕತೆ ಮುಂದುವರಿಸಲಿದ್ದೇವೆ. ಈ ಸಂಪರ್ಕ ಮುಂದುವರಿಯಲಿದೆ" ಎಂದು ಹೇಳಿದರು.

ಆದರೆ ಮಾಜಿ ನಟ ಆಗಿರುವ ಉಕ್ರೇನ್ ಅಧ್ಯಕ್ಷರ ಒಪ್ಪಂದ ಮಾತುಕತೆ ಒಂದು ನಟನೆ ಎಂದು ಲಾವ್‍ರೋವ್ ಬಣ್ಣಿಸಿದರು. "ನೀವು ಗಮನವಿಟ್ಟು ನೋಡಿದರೆ, ಗಮನವಿಟ್ಟು ಓದಿದರೆ ಸಾವಿರಾರು ವೈರುದ್ಧ್ಯಗಳನ್ನು ನೀವು ಕಾಣಬಹುದು" ಎಂದು ಹೇಳಿದರು. ಪ್ರಸಕ್ತ ಉದ್ವಿಗ್ನತೆ ಹಿನ್ನೆಲೆಯಲ್ಲಿ ಮೂರನೇ ಮಹಾಯುದ್ಧದ ಅಪಾಯ "ನಿಜ" ಎಂದು ಹೇಳಿದರು.

"ಈ ಅಪಾಯ ಗಂಭೀರ, ಇದು ನಿಜ; ನೀವು ಕಡೆಗಣಿಸಲಾಗದು" ಎಂದು ಲಾರ್ವೊವ್ ಇಂಟ್ರಾಫ್ಯಾಕ್ಸ್ ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದರು. ಉಕ್ರೇನ್ ಜತೆಗಿನ ಸಂಘರ್ಷದ ಬಗ್ಗೆ ಪ್ರತಿಕ್ರಿಸಿಯಿಸಿ, ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ರತಿಯೊಂದೂ ಮುಕ್ತಾಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News