×
Ad

6-12 ವರ್ಷದೊಳಗಿನ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡುವುದಕ್ಕೆ ಡಿಸಿಜಿಐ ಅನುಮೋದನೆ: ಸಚಿವ ಡಾ.ಸುಧಾಕರ್

Update: 2022-04-26 14:04 IST

ಬೆಂಗಳೂರು, ಎ.26: ಆರರಿಂದ ಹನ್ನೆರಡು ವರ್ಷ ವಯಸ್ಸಿನವರಿಗೆ ನೀಡಲು ಉದ್ದೇಶಿಸಿರುವ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯನ್ನು ಡಿಸಿಜಿಐ(Drugs Controller General of India) ಅನುಮೋದಿಸಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ. 

ಈ ಬಗ್ಗೆ ಕೂ ಮಾಡಿರುವ ಸಚಿವರು, 'ಕೋವಿಡ್ -19 ವಿರುದ್ಧದ ಭಾರತದ ಯುದ್ಧಕ್ಕೆ ಇದು ದೊಡ್ಡ ಉತ್ತೇಜನ ನೀಡಲಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕುವಂತೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಸಾಮೂಹಿಕ ಹೋರಾಟವನ್ನು ಬಲಪಡಿಸಲು ಕೈಜೋಡಿಸುವಂತೆ ಕೋರುತ್ತೇನೆ' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News