×
Ad

ಅಖಿಲ ಭಾರತ ಬ್ಯಾರಿ ಪರಿಷತ್, ಅಹಿಂದ ಜನಚಳುವಳಿ ವತಿಯಿಂದ ʼರಮಝಾನ್ ಉಪವಾಸ, ಝಕಾತ್ ನ ಮಹತ್ವಗಳುʼ ಕಾರ್ಯಕ್ರಮ

Update: 2022-04-26 22:43 IST

ಮಂಗಳೂರು : ಇಸ್ಲಾಮ್ ಧರ್ಮದ ಪಂಚ ಸ್ತಂಭಗಳಲ್ಲೊಂದಾದ ರಮಝಾನ್ ತಿಂಗಳ ಉಪವಾಸವು, ಉತ್ತಮ ಜೀವನ ಕ್ರಮವನ್ನು ಅನುಸರಿಸಲು  ತರಬೇತಿಯನ್ನು ನೀಡುವ ಮೂಲಕ, ಸ್ವ ನಿಯಂತ್ರಣದೊಂದಿಗೆ  ಉತ್ತಮ  ವ್ಯಕ್ತಿತ್ವವನ್ನು ನಿರ್ಮಿಸುವುದಲ್ಲದೆ, ಸಮಾಜದ ಬಡವರ ಮತ್ತು ದಮನಕ್ಕೊಳಪಟ್ಟವರ ಬಗ್ಗೆ ಕಾಳಜಿ ವಹಿಸಿ, ಸಮಸ್ತ ಮನುಕುಲದ ಅಭಿವೃದ್ಧಿಗೆ ಮತ್ತು ನ್ಯಾಯ ಪರಿಪಾಲನೆಗೆ ಉತ್ತೇಜಿಸುತ್ತದೆ ಎಂದು ಶಾಂತಿ ಪ್ರಕಾಶನ ಮಂಗಳೂರು ಇದರ ಮುಖ್ಯಸ್ಥರಾದ ಮುಹಮ್ಮದ್ ಕುಂಞಿ ಸಂದೇಶ ನೀಡಿದರು.

ಅವರು ಅಖಿಲ ಭಾರತ ಬ್ಯಾರಿ ಪರಿಷತ್ ಮತ್ತು ಅಹಿಂದ ಜನಚಳುವಳಿ ದ.ಕ.ಮಂಗಳೂರು ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆದ "ರಮಝಾನ್ ಉಪವಾಸ ಮತ್ತು ಝಕಾತ್ ನ ಮಹತ್ವಗಳು" ಎಂಬ ವಿಚಾರವಿಮರ್ಶೆ ಹಾಗೂ‌ ಹೈಕೋರ್ಟ್ ನಿಯೋಜಿತ ಹಿರಿಯ ನ್ಯಾಯವಾದಿಯವರಿಗೆ ಅಭಿನಂದನಾ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಹೈಕೋರ್ಟ್ ಹಿರಿಯ ನ್ಯಾಯವಾದಿಯಾಗಿ ಇತ್ತೀಚೆಗೆ ನಿಯುಕ್ತಿಗೊಳಿಸಲ್ಪಟ್ಟ ತಾರನಾಥ್ ಪೂಜಾರಿ ಇರುವೈಲು ಇವರನ್ನು  ಈ ಸಂದರ್ಭ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಧರ್ಮಗಳು ಒಂದಕ್ಕೊಂದು ಪೂರಕ ಹೊರತು ಪರಸ್ಪರ ವಿರುದ್ಧ ಅಲ್ಲ. ಜೀವನದ ಹಲವು ವಿಷಯಗಳ ಬಗ್ಗೆ ಎಲ್ಲಾ ಧರ್ಮಗಳು ಒಂದೇ ರೀತಿಯಾಗಿ ಸ್ಪಂದಿಸಿದರೆ,  ಕೆಲವು ತತ್ವಗಳ ಬಗ್ಗೆ ಮಾತ್ರ ವಿಭಿನ್ನ ದಾರಿ ತೋರಿಸಿವೆ. ಇವುಗಳನ್ನು ಅರ್ಥೈಸಿಕೊಂಡು ನಾವು ಜೀವನ ಸಾಗಿಸಬೇಕಾಗಿದೆ ಎಂದರು.

ಪದ್ಮನಾಭ ನರಿಂಗಾನ, ರೊನಾಲ್ಡ್ ಗೋಮ್ಸ್, ಬಿ.ಎ.ಮುಹಮ್ಮದ್ ಹನೀಫ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು.

ಯೂಸುಫ್ ವಕ್ತಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ರಾದ ಶಾಹುಲ್ ಹಮೀದ್ ಮೆಟ್ರೋ ರವರು  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಭರತೇಶ್ ಬಜಾಲ್, ಇಸ್ಮಾಯಿಲ್ ಪೆರಿಂಜೆ, ಮುಹಮ್ಮದ್ ಇಂಜಿನಿಯರ್, ಹೈದರಾಲಿ, ಅಕ್ರಮ್ ಹಸನ್ ಉಳ್ಳಾಲ್, ನಿಸಾರ್ ಫಕೀರ್ ಮುಹಮ್ಮದ್, ನ್ಯಾಯವಾದಿ ಮುಕ್ತಾರ್ ಅಹ್ಮದ್, ಇಬ್ರಾಹಿಂ ಕೋಣಾಜೆ, ಬಶೀರ್ ಮೊಂಟೆಪದವು, ಅಬ್ದುಲ್ ಖಾದರ್ ಇಡ್ಮಾ , ಹನೀಫ್ ಬಜಾಲ್, ಹಮೀದ್ ಕಿನ್ಯ ಮತ್ತಿತರ ಗಣ್ಯರು ಹಾಗೂ ಇತರ ಸಭಿಕರು ಉಪಸ್ಥಿತರಿದ್ದರು. ನಂತರ ಇಫ್ತಾರ್ ಕೂಟ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News