×
Ad

ತೆಕ್ಕಟ್ಟೆ: ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾದ ಚಿರತೆ

Update: 2022-04-28 10:29 IST

ಕುಂದಾಪುರ : ಅರಣ್ಯ ಇಲಾಖೆಯಿಂದ ಇಡಲಾದ ಬೋನಿನಲ್ಲಿ ಸುಮಾರು ಎರಡೂವರೆ ವರ್ಷ ಪ್ರಾಯದ ಹೆಣ್ಣು ಚಿರತೆ ಸೆರೆಯಾಗಿರುವ ಘಟನೆ ಇಂದು ಬೆಳಗ್ಗೆ ತೆಕ್ಕಟ್ಟೆ ಸಮೀಪದ ಮಾಲಾಡಿ ಎಂಬಲ್ಲ್ ನಡೆದಿದೆ.

ಮಾಲಾಡಿ ಶ್ರೀನಂದಿಕೇಶ್ವರ ದೇವಸ್ಥಾನ ಬಳಿಯ ತೋಟದಲ್ಲಿ ಚಿರತೆ ನಿರಂತರ ಓಡಾಟದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಅರಣ್ಯ ಇಲಾಖೆಯಿಂದ ನಾಯಿ ಯೊಂದಿಗೆ ಬೋನು ಇಡಲಾಗಿತ್ತು. ಬೇಟೆ ಆರಿಸಿಕೊಂಡು ಬಂದ ಚಿರತೆಯು  ಬೋನಿಗೆ ಬಿದ್ದಿರುವುದು ಗಮನಕ್ಕೆ ಬಂತ್ತೆನ್ನಲಾಗಿದೆ.

ಎಕರೆ ಗಟ್ಟಲೆ ಇರುವ ತೋಟದ ಈ ಪರಿಸರದಲ್ಲಿ ಅಂಗನವಾಡಿ, ಶಾಲೆ ಹಾಗೂ ಮನೆಗಳಿದ್ದು, ಕಳೆದ ವರ್ಷವೂ ಇಲ್ಲಿ ನಾಯಿ, ಜಾನುವಾರು, ಸಾಕು ಪ್ರಾಣಿಗಳ ಮೇಲೆ ದಾಳಿ ಚಿರತೆ ದಾಳಿ ನಡೆಸಿತ್ತು. ಮಾತ್ರವಲ್ಲ ನಿರಂತರವಾಗಿ ಜನರಿಗೆ ಚಿರತೆ ಕಾಣಿಸಿಕೊಂಡಿತ್ತು.

ಚಿರತೆ ಸೆರೆಗೆ ಬೋನಿಟ್ಟು ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಕಳೆದ ತಿಂಗಳಾಂತ್ಯದಲ್ಲಿ ಬೋನಿಟ್ಟು ಚಿರತೆ ಸೆರೆಗೆ ಮುಂದಾಗಿತ್ತು. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಚಿರತೆ ಸೆರೆ ಕಾರ್ಯಾಚರಣೆಗೆ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಸಹಕಾರ ನೀಡಿದ್ದರು.

ನಾಲ್ಕು ವರ್ಷಗಳಲ್ಲಿ 5 ಚಿರತೆಗಳ ಸೆರೆ

ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಇಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದವು. 2019ರ ಅ.೬, ಡಿ.೧೨, ಡಿ.೨೪ರಂದು ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ನಾಲ್ಕು ವರ್ಷದಲ್ಲಿ ಈ ತೋಟದಲ್ಲಿ ಸೆರೆಸಿಕ್ಕ 5ನೇ ಚಿರತೆ ಇದಾಗಿದ್ದು ಈ ತೋಟ ಚಿರತೆಗಳ ಹಾಟ್ ಸ್ಫಾಟ್ ಆಗಿದೆ. ಚಿರತೆ ಸೆರೆಯಾದ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿ ದಂತೆ ವಸತಿ ಪ್ರದೇಶವಿದೆ. ಆಸುಪಾಸಿನಲ್ಲಿ ೫೦ಕ್ಕೂ ಅಧಿಕ ಮನೆಗಳಿದೆ. ನಿರಂತರ ವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ಆತಂಕಗೊಂಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಚಿರತೆಗಳಿರುವ ಆತಂಕ ಜನರಲ್ಲಿದ್ದು ಮತ್ತೆ ಬೋನಿಟ್ಟು ಕಾರ್ಯಾಚರಣೆ ನಡೆಸುವುದಾಗಿ ಅರಣ್ಯ ಇಲಾಖೆಯವರು ಹೇಳಿದ್ದಾರೆ.

ರಾತ್ರಿ ಮತ್ತೆ ಚಿರತೆ ಪ್ರತ್ಯಕ್ಷ..!

ಮಾಲಾಡಿ ತೋಟದಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಬೆಳಗ್ಗೆ ರಕ್ಷಿಸಿದ್ದರೆ, ರಾತ್ರಿ ವೇಳೆ .೪೫ರ ಸುಮಾರಿಗೆ ಮತ್ತೆ ಇದೇ ತೋಟದಲ್ಲಿ ಚಿರತೆಯೊಂದು ಕಂಡುಬಂದಿದೆ.ಅಂದಾಜು 2.5 ವರ್ಷದ ಹೆಣ್ಣು ಚಿರತೆ ಬಿದ್ದಿದ್ದು ಗುರುವಾರ ಬೆಳಿಗ್ಗೆ ವರದಿಯಾಗಿತ್ತು.

ರಾತ್ರಿ ದೊಡ್ಡ ಗಾತ್ರದ ಚಿರತೆಯೊಂದು ಸ್ಥಳೀಯ ನಿವಾಸಿ ಬೈಕ್ ಸವಾರ ಸತೀಶ್ ದೇವಾಡಿಗ ಸಂಚರಿಸುತ್ತಿದ್ದ ಬೈಕಿಗೆ ಅಡ್ಡವಾಗಿ ಬಂದಿದ್ದು ಸತೀಶ್ ಅಪಾಯದಿಂದ ಪಾರಾಗಿದ್ದಾರೆ. ಚಿರತೆ ಚಲನವಲನದ ಹೆಜ್ಜೆ ಗುರುತು ಸ್ಥಳದಲ್ಲಿ  ಕಂಡುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News