×
Ad

ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಇಂಜಿನ್ ಸರ್ಕಾರವಲ್ಲ, ಡೀಲಿಂಗ್ ಸರ್ಕಾರ: ದಿನೇಶ್ ಗುಂಡೂರಾವ್ ಆರೋಪ

Update: 2022-04-28 11:42 IST

ಬೆಂಗಳೂರು : ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಡಬಲ್ ಇಂಜಿನ್ ಸರ್ಕಾರವಲ್ಲ. ಇದು ಡೀಲಿಂಗ್ ಸರ್ಕಾರ. ಈ ಸರ್ಕಾರದಲ್ಲಿ ಪ್ರತಿ ಸರ್ಕಾರಿ ಉದ್ಯೋಗಕ್ಕೂ ಇಂತಿಷ್ಟು ರೇಟ್ ಎಂದು ಫಿಕ್ಸ್ ಆಗಿದೆ. ಪಿಎಸೈ ನೇಮಕಾತಿಯಲ್ಲಿ ಡೀಲಿಂಗ್, ಪ್ರಾಧ್ಯಾಪಕರ‌ ನೇಮಕಾತಿಯಲ್ಲಿ ಡೀಲಿಂಗ್, ಇಂಜಿನಿಯರ್‌ಗಳ ನೇಮಕಾತಿಯಲ್ಲೂ ಡೀಲಿಂಗ್. ಇದು ಡೀಲಿಂಗ್ ಸರ್ಕಾರವಲ್ಲದೆ ಮತ್ತೇನು.?‌ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ. 

ರಾಜ್ಯ ಬಿಜೆಪಿ ಸರ್ಕಾರ ಅರ್ಹತಾ ಪರೀಕ್ಷೆಯ ಮೂಲಕ ಸರ್ಕಾರಿ ಉದ್ಯೋಗ ಭರ್ತಿ ಮಾಡುವುದೇಕೆ ? ವಿಧಾನಸೌಧವನ್ನೇ ಡೀಲಿಂಗ್ ಸೆಂಟರ್ ಮಾಡಿಕೊಂಡಿರುವಾಗ ಎಲ್ಲಾ ನೇಮಕಾತಿಯನ್ನು ಹರಾಜು ಪ್ರಕ್ರಿಯೆಯ ಮೂಲಕವೇ ನಡೆಸಲಿ. ಈ ಸರ್ಕಾರದಲ್ಲಿ ದುಡ್ಡಿದ್ದವನಿಗೆ ಉದ್ಯೋಗ ಎಂದ ಮೇಲೆ ಬಡವರು ಯಾಕೆ ಪರೀಕ್ಷೆ ಬರೆಯಬೇಕು ? ಸಮಯ-ಹಣ ಯಾಕೆ ವ್ಯರ್ಥ ಮಾಡಬೇಕು.?

ಡೀಲಿಂಗ್ ದಂಧೆಯಲ್ಲಿ ಮುಳುಗಿರುವ ರಾಜ್ಯ BJP ಸರ್ಕಾರ ಇತಿಹಾಸ ಕಂಡ ಅತ್ಯಂತ ಕಡುಭ್ರಷ್ಟ ಸರ್ಕಾರ. ಸರ್ಕಾರಿ ಉದ್ಯೋಗಕ್ಕೆ ರೇಟ್ ಫಿಕ್ಸ್ ಮಾಡಿ ದಂಧೆ ನಡೆಸುವ ಈ ಸರ್ಕಾರಕ್ಕೆ ಮಾನ ಮಾರ್ಯಾದೆಯೇನಾದರೂ ಇದೆಯೆ ? ಭ್ರಷ್ಟಾಚಾರವನ್ನು ಹಾಸು ಹೊದ್ದು ಮಲಗಿರುವ ಈ ಸರ್ಕಾರಕ್ಕೆ ಜನರ ಎದುರು ಮುಖ ತೋರಿಸಲು ನಾಚಿಕೆಯಾಗುವುದಿಲ್ಲವೆ ? ಎಂದು ಟ್ವೀಟ್‌ ಮಾಡುವ ಮೂಲಕ ದಿನೇಶ್ ಗುಂಡೂರಾವ್ ಅವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News