×
Ad

ಬೆಂಗಳೂರು | ವಂಚನೆ ಆರೋಪ: ಧಾರಾವಾಹಿ ನಿರ್ದೇಶಕ ಬಂಧನ

Update: 2022-04-29 17:58 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.29: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯ ನಿರ್ದೇಶಕನನ್ನು ವೈಯ್ಯಾಲಿಕಾವಲ್ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ವಂಚನೆ ಆರೋಪದಡಿ ನಿರ್ಮಾಪಕ ರೋಹಿತ್ ನೀಡಿದ್ದ ದೂರಿನನ್ವಯ ನಿರ್ದೇಶಕ ಅರವಿಂದ್ ಕೌಶಿಕ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅರವಿಂದ್ ಕೌಶಿಕ್ ಧಾರಾವಾಹಿ ಮಾತ್ರವಲ್ಲದೆ ಹಲವು ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಆದರೆ, 2018ರಲ್ಲಿ 'ಕಮಲಿ' ಧಾರಾವಾಹಿ ನಿರ್ಮಾಣಕ್ಕೆ ರೋಹಿತ್ ಹಣ ಹೂಡಿಕೆ ಮಾಡಿದ್ದರು. ಧಾರಾವಾಹಿ ತೆರೆಕಂಡ ನಂತರ ಹಣ ಹಿಂತಿರುಗಿಸದೇ ಮತ್ತು ಲಾಭಾಂಶ ನೀಡದೇ ವಂಚಿಸಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಕೌಶಿಕ್ ವಿರುದ್ಧ ನಿರ್ಮಾಪಕ ರೋಹಿತ್ ವೈಯ್ಯಾಲಿಕಾವಲ್ ಠಾಣೆಗೆ ದೂರು ನೀಡಿದ್ದರು. 

ಅರವಿಂದ್ ಕೌಶಿಕ್ ವಿರುದ್ದ 506 ಹಾಗೂ 420ರಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ, ಈ ಸಂಬಂಧ ಪ್ರಧಾನಮಂತ್ರಿ ಕಚೇರಿ ಮತ್ತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೂ ನಿರ್ಮಾಪಕ ಪತ್ರ ಬರೆದಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News