×
Ad

ಅಂತರಾಷ್ಟ್ರೀಯ ಸೀನಿಯರ್ ಚೇಂಬರ್ ಮಂಗಳೂರು ಘಟಕದ ಅಧ್ಯಕ್ಷ ರಾಗಿ ಕಿಶೋರ್ ಫೆರ್ನಾಂಡಿಸ್ ಪದಗ್ರಹಣ

Update: 2022-04-29 21:10 IST

ಮಂಗಳೂರು : ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್, ಮಂಗಳೂರು 2022–23ನೇ ಸಾಲಿನ ಪದಗ್ರಹಣ ಸಮಾರಂಭ ನಗರದ ಹೋಟೆಲ್ ಮಾಯಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.

2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಿಶೋರ್ ಫೆರ್ನಾಂಡಿಸ್, ಕಾರ್ಯದರ್ಶಿಯಾ ಗಿ ಫ್ಲೇವಿ ಡಿ ಮೆಲ್ಲೋ, ಜತೆ ಕಾರ್ಯದರ್ಶಿ ಹಾಗೂ ಪಿಆರ್ ಒ ಆಗಿ ಲತಾ ಕಲ್ಲಡ್ಕ ಹಾಗೂ ಖಜಾಂಚಿಯಾಗಿ ಶಾಲಿನಿ ಪಿ. ಸುವರ್ಣ,ಸೀನಿಯರೇಟ್ ಅಧ್ಯಕ್ಷೆಯಾಗಿ ನಿರ್ಮಲಾ ಪ್ರಮೋದ್ , ಸೀನಿಯರೇಟ್ ಕಾರ್ಯದರ್ಶಿಯಾಗಿ ಮಾಲತಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶೋರ್ ಫೆರ್ನಾಂಡಿಸ್ ಅವರಿಗೆ ಕಳೆದ ಸಾಲಿನ ಅಧ್ಯಕ್ಷರಾದ ರಾಷ್ಟೀಯ ಪ್ರಶಸ್ತಿ ವಿಜೇತರಾದ ಹರಿಪ್ರಸಾದ್ ಅವರು ಪ್ರಮಾಣ ವಚನ ಬೋಧಿಸಿದರು. ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಸೀನಿಯರ್ ಚೇಂಬರ್ ಅಧ್ಯಕ್ಷರಾದ ಡಾ.ಅರವಿಂದ ರಾವ್ ಕೇದಿಗೆ ಭಾಗವಹಿಸಿ ಶುಭ ಹಾರೈಸಿದರು.

ಅತಿಥಿಗಳಾಗಿ ಭಾರತೀಯ ಜೂನಿಯರ್ ಚೇಂಬರಿನ ಜನರಲ್ ಲೀಗಲ್ ಕೌನ್ಸಿಲ್  ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆ, ಭಾರತೀಯ ಭೂಸೇನೆಯ ನಿವೃತ್ತ ಹಿರಿಯ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ಹೆಬ್ರಿ, ಅಂತಾರಾಷ್ಟ್ರೀಯ ಸೀನಿಯರ್ ಚೇಂಬರಿನ ನಿರ್ದೇಶಕರಾದ ಚಿತ್ರ ಕುಮಾರ್  ಅವರು ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ 6 ಮಂದಿ ಹೊಸ ಸದಸ್ಯರು ಮಂಗಳೂರು ಲೀಜನಿಗೆ ಸೇರ್ಪಡೆಗೊಂಡರು. ಸದಸ್ಯರಾದ ಅಶೋಕ್ ಎಂ.ಕೆ. ಮತ್ತು ವಿಕಾಸ್ ಶೆಟ್ಟಿ ದೇಣಿಗೆಯಿತ್ತರು. ಅಧ್ಯಕ್ಷರಾದ ಹರಿಪ್ರಸಾದ್ ಅವರು ಸ್ವಾಗತಿಸಿ, ಹೊಸದಾಗಿ ಆಯ್ಕೆಯಾದ ಕಾರ್ಯದರ್ಶಿ ಫ್ಲೇವಿ ಡಿಮೆಲ್ಲೊರವರು ವಂದಿಸಿದರು.

ಪ್ರೀತಿ ರೈ, ಶಾಲಿನಿ ಪ್ರಶಾಂತ್, ಸುರೇಶ್ ಎಂ.ಎಸ್.,ಲತಾ ಕಲ್ಲಡ್ಕ, ದತ್ತಾತ್ರೇಯ ಬಿ., ಫ್ಲೇವಿ ಡಿಮೆಲ್ಲೊ ವಿವಿಧ ಜವಾಬ್ದಾರಿ ನಿರ್ವಹಿಸಿದರು.ಉಡುಪಿ ಟೆಂಪಲ್ ಸಿಟಿ ಲೀಜನ್, ಬಂಟ್ವಾಳ ನೇತ್ರಾವತಿ ಸಂಗಮ ಲೀಜನ್, ಉಳ್ಳಾಲ ರಾಣಿ ಅಬ್ಬಕ್ಕ ಲೀಜನ್, ಮಂಗಳೂರು ಜೇಸಿಸ್ ಮತ್ತಿತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News