ಬೆಂಗಳೂರು: ಗೂಂಡಾ ಕಾಯ್ದೆಯಡಿ ಸೈಕಲ್ ರವಿ ಬಂಧನ

Update: 2022-04-30 15:03 GMT

ಬೆಂಗಳೂರು, ಎ.30: ಕೆಜಿ ನಗರ, ತಲಘಟ್ಟಪುರ ಮತ್ತು ಸಿ.ಕೆ.ಅಚ್ಚುಕಟ್ಟು  ಪೊಲೀಸ್ ಠಾಣೆಯ ರೌಡಿ ಶೀಟರ್ ಸೈಕಲ್ ರವಿ(45)ಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತ ಈವರೆಗೆ 8 ಕೊಲೆ, 7 ಕೊಲೆಯತ್ನ, 4 ಅಪಹರಣ ಸೇರಿದಂತೆ ಒಟ್ಟು 32 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಗಳಲ್ಲಿ 1997ರಿಂದ ನಿರಂತರವಾಗಿ ರೌಡಿ ಚಟುವಟಿಕೆಗಳಲ್ಲಿ ನಿರತನಾಗಿ ಹಲವಾರು ಕೊಲೆ, ಕೊಲೆಯತ್ನ, ಹಲ್ಲೆ, ಸುಲಿಗೆ, ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದನು. ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ. ಆರೋಪಿ ಸೈಕಲ್ ರವಿ ಹಲವಾರು ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೆ, ತಲೆ ಮರೆಸಿಕೊಂಡು ತನ್ನ ಸಹಚರರ ಮುಖಾಂತರ ಗಂಭೀರ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದನು.

ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಸೈಕಲ್ ರವಿಯನ್ನು ಗೂಂಡಾ ಎಂದು ಪರಿಗಣಿಸಿ ಈತನನ್ನು ಬಂಧನದಲ್ಲಿಡಲು ಆದೇಶ ನೀಡಿದ್ದರು. ಬಂಧನದ ಆದೇಶವನ್ನು ಸುಬ್ರಹ್ಮಣ್ಯಪುರ ಪೊಲೀಸರು ಜಾರಿಗೊಳಿಸಿರುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News