ಸಾಹಿತ್ಯ ನನ್ನ ಜೀವನದ ಉಪ ಉತ್ಪನ್ನವಾಗಿದೆ: ಸಾಹಿತಿ ಬಿ.ಆರ್. ಲಕ್ಷ್ಮಣ್‍ರಾವ್

Update: 2022-04-30 16:47 GMT

ಬೆಂಗಳೂರು, ಎ.30: ನನಗೆ ನನ್ನ ಸಾಹಿತ್ಯ ಎಂಬುದು ಜೀವನದ ಉಪ ಉತ್ಪನ್ನವಾಗಿದೆಯೇ ಹೊರತು ನನ್ನ ಸಾಧನೆಯಲ್ಲ ಎಂದು ಸಾಹಿತಿ ಬಿ.ಆರ್. ಲಕ್ಷ್ಮಣ್‍ರಾವ್ ಅಭಿಪ್ರಾಯಪಟ್ಟರು. 

ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾನು ಬರೆದ ಕತೆ, ಕವನಗಳನ್ನು ಸಾಧನೆ ಎಂದು ಪರಿಗಣಿಸಿಲ್ಲ. ನನಗೆ ಅಂತಹ ಆಸೆಯೂ ಇಲ್ಲ. ಎಲ್ಲಾ ಆಸಕ್ತಿಗಳಂತೆ ಸಾಹಿತ್ಯವು ಒಂದು ಆಸಕ್ತಿ ಆಗಿದೆ. ಈ ನಿಟ್ಟಿಲ್ಲಿ ಸಾಹಿತ್ಯವು ಸ್ವಭಾವವಾಗಿದೆ ಎಂದರು.

ಅಡಿಗರ ನೇತೃತ್ವದಲ್ಲಿ ನವ್ಯ ಕಾಲದ ಉಚ್ರಾಯ ಸ್ಥಿತಿಯಲ್ಲಿದ್ದಾಗ ನಾನು ಸಾಹಿತ್ಯವನ್ನು ಬರೆಯಲು ಪ್ರಾರಂಭಿಸಿದೆನು. ಆಗ ವೈಎನ್‍ಕೆ ಹಾಗೂ ಲಂಕೇಶ್ ಅವರು ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದರು ಎಂದು ಅವರು ನೆನಪಿಸಿಕೊಂಡರು.

ತರುಣ ಕವಿಗಳಿಗೆ ತಿಳಿವಳಿಕೆ ಹೇಳಲು ಅವರು ಕೇಳುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಅವರಿಗೆ ಹೇಳುವವರಿಲ್ಲ. ಅವರು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ತಮಗಿಷ್ಟ ಬಂದಂತೆ ಬರೆಯುತ್ತಿದ್ದಾರೆ ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News