×
Ad

ತೊಕ್ಕೊಟ್ಟು : ನೇತ್ರದಾನ ಅಭಿಯಾನ ಸಮಾರೋಪ

Update: 2022-05-01 17:03 IST

ಉಳ್ಳಾಲ: ಶ್ರೀ ಸಾಯಿ ಪರಿವಾರ್ ಟ್ರಸ್ಟ್ ಇದರ ಆಶ್ರಯದಲ್ಲಿ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ಸಹಯೋಗದಲ್ಲಿ ಡಾ. ಪುನೀತ್ ರಾಜ್ ಕುಮಾರ್ ನೆನಪಿನಂಗಳದಲ್ಲಿ ನಡೆದ ಬೃಹತ್ ನೇತ್ರದಾನ ಅಭಿಯಾನದ ಸಮಾರೋಪ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ತೊಕ್ಕೊಟ್ಟು ಗಟ್ಟಿ ಸಮಾಜ ಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ  ಮಾತನಾಡಿ, ನಾವು ಇನ್ನೊಬ್ಬರ ಮನೆಗೆ ಬೆಳಕಾಗಿ ಇರಬೇಕು. ನೇತ್ರದಾನ ದಂತಹ ಉತ್ತಮ  ಕಾರ್ಯಕ್ರಮಗಳಿಗೆ ಎಲ್ಲರೂ ಪ್ರೋತ್ಸಾಹ, ಸಹಕಾರ ನೀಡಬೇಕು. ಕತ್ತಲಲ್ಲಿರುವ ಜನರಿಗೆ ನೇತ್ರದಾನ ಮಾಡಿ ಬೆಳಕು ಕೊಡುವ ಸೇವೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ಯೋಗನಾಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರವೀಣ್ ಕುಂಪಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿವಿ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಎಸಿಪಿ ದಿನಕರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಮೈಸೂರು ಇಲೆಕ್ಟ್ರಿಕಲ್ ಪ್ರೈವೇಟ್ ಲಿಮಿಟೆಡ್ ನಿಗಮದ ಅಧ್ಯಕ್ಷ ಸಂತೋಷ್ ಬೋಳಿಯಾರ್, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿ.ಪಂ.ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಶಾರದಾ ವಿದ್ಯಾ ಸಂಸ್ಥೆ ಯ ಅಧ್ಯಕ್ಷ ರಾಜಾರಾಂ ಭಟ್, ಚೀರುಂಭ ಭಗವತಿ ದೇವಸ್ಥಾನ ದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ, ಉಮಾ ಮಹೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ  ಎ.ಜೆ ಶೇಖರ್, ಸುರೇಶ್ ಭಟ್ನಗರ್, ದಯಾನಂದ ಪಿಲಿಕೂರು, ವೀರೇಂದ್ರ ಶೆಟ್ಟಿ ಕಾವೂರು ಡಾ.ಸುಬ್ರಹ್ಮಣ್ಯ ಭಟ್, ಪ್ರವೀಣ್ ಶೆಟ್ಟಿ ಮೇಗಿನಮನೆ, ಸಾಯಿ ಪರಿವಾರ್ ಟ್ರಸ್ಟೀ ಪುರುಷೊತ್ತಮ ಕಲ್ಲಾಪು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News