ಕೋಡಿ: ಮೇ 7ರಿಂದ ಬ್ಯಾರೀಸ್ ಕಾಲೇಜಿನಲ್ಲಿ ವಾಲಿಬಾಲ್ ಶಿಬಿರ

Update: 2022-05-02 12:15 GMT

ಕೋಡಿ: ಮಂಗಳೂರು ವಿ.ವಿ. ದೈಹಿಕ ಶಿಕ್ಷಣ ವಿಭಾಗ ಮತ್ತು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು, ಕೋಡಿ ಕುಂದಾಪುರ ಇವರ ಆಶ್ರಯದಲ್ಲಿ ಮೇ 7 ರಿಂದ ಮೇ 15ರವರೆಗೆ ಉಚಿತ ವಾಲಿಬಾಲ್ ಶಿಬಿರ ನಡೆಯಲಿದೆ.

ಶಿಬಿರ ಪ್ರತಿದಿನ ಬೆಳಗ್ಗೆ 7:30 ರಿಂದ 10:30ರವರೆಗೆ, ಮಧ್ಯಾಹ್ನ 3:00 ರಿಂದ 6:00ರವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದ್ದು, 14 ರಿಂದ 18 ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.

ಆಸಕ್ತರು ತರಬೇತುದಾರರಾದ ಇಲ್ಯಾಸ್, ಮಹಮ್ಮದ್ ಸಮೀರ್, ವೀಣಾ ಅಗೇರ್ ಇವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಪ್ರೋ. ದೋಮ ಚಂದ್ರಶೇಖರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News