×
Ad

ಸುರತ್ಕಲ್; ಬೈಕ್ ಗಳ‌ ಮಧ್ಯೆ ಮುಖಾಮುಖಿ ಢಿಕ್ಕಿ: ಮೂವರಿಗೆ ಗಾಯ

Update: 2022-05-03 18:12 IST

ಸುರತ್ಕಲ್, ಮೇ 3: ಎರಡು ಬೈಕುಗಳ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿರುವ ಘಟನೆ ಸುರತ್ಕಲ್ ನ  ಕಾಟಿಪಳ್ಳ 4ನೇ ಬ್ಲಾಕ್ ಕರ್ನಾಟಕ ಬ್ಯಾಂಕ್ ಎದುರು ಮಂಗಳವಾರ ನಡೆದಿದೆ.

ಗಾಯಗೊಂಡವರನ್ನು ಕಿನ್ನಿಗೋಳಿ ಗುತ್ತಕಾಡು ಶಾಂತಿನಗರ ನಿವಾಸಿಗಳಾದ ಅಹ್ಮದ್ ಬಾವ, ಅವರ ಮಗ ಕಲಂದರ್ ಶಾಫಿ ಮತ್ತು  ಇನ್ನೊಂದು ಬೈಕ್ ಸವಾರ ಮೂಲತಃ ಉತ್ತರ ಭಾರತದ ಸದ್ಯ ಕಾಟಿಪಳ್ಳ ನಾಲ್ಕನೇ ಬ್ಲಾಕ್ ನಲ್ಲಿ ವಾಸವಾಗಿರುವ ವಿಕಾಸ್ ಎಂದು ತಿಳಿದುಬಂದಿದೆ.

ಘಟನೆಯಿಂದ ಅಹ್ಮದ್ ಬಾವ ಅವರಿಗೆ ಗಂಭೀರ ಗಾಯಗಳಾಗಿದ್ದು ಕಲಂದರ್ ಶಾಫಿ ಮತ್ತು ಇನ್ನೊಂದು ಬೈಕ್ ಸವಾರ ವಿಕಾಸ್ ಗೆ ಸಣ್ಣಪುಟ್ಟ ಪ್ರಮಾಣದ ಗಾಯಗಳಾಗಿವೆ. ಗಾಯಾಳುಗಳನ್ನು ಸುರತ್ಕಲ್‌ ನಲ್ಲಿರುವ  ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮುಕ್ಕದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೇ 11ರಂದು ಗಾಯಾಳು ಕಲಂದರ್ ಶಾಫಿ ಮತ್ತು ಅವರ ಸಹೋದರನ ವಿವಾಹ ಕಾರ್ಯಕ್ರಮ ಇದ್ದು, ಈ ಹಿನ್ನೆಲೆಯಲ್ಲಿ ಶಾಫಿ ಮತ್ತು ಅವರ ತಂದೆ ಅಹ್ಮದ್ ಬಾವಾ ಅವರು ಕುಟುಂಬಿಕರಿಗೆ ಮದುವೆ ಆಮಂತ್ರಣ ಹಂಚಲು ತೆರಳುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News