ಮುಲ್ಕಿ: ಸಂಭ್ರಮದ ಈದುಲ್ ಫಿತ್ರ್ ಆಚರಣೆ
Update: 2022-05-03 20:08 IST
ಮುಲ್ಕಿ: ಮುಲ್ಕಿ ಪರಿಸರದಲ್ಲಿ ಈದ್ ಅಲ್-ಫಿತರ್ ಸಂಭ್ರಮದಿಂದ ಆಚರಿಸಲಾಯಿತು.
ಮುಲ್ಕಿಯ ಕೇಂದ್ರ ಜುಮಾ ಮಸೀದಿಯಲ್ಲಿ ಎಸ್. ಬಿ. ದಾರಿಮಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಎಲ್ಲರೂ ಶಾಂತಿ ಸಹಬಾಳ್ವೆ ಜೀವನ ಸಾಗಿಸಲು ಕರೆ ನೀಡಿದರು.
ಈ ಸಂದರ್ಭ ಕಾರ್ನಾಡು ಮಸೀದಿಯ ಖತೀಬ್ ಇಸ್ಮಾಯಿಲ್ ದಾರಿಮಿ, ಗೌರವಾಧ್ಯಕ್ಷ ಇನಾಯತ್ ಆಲಿ, ಅಧ್ಯಕ್ಷ ಲಿಯಾಕತ್ ಆಲಿ, ಮುಲ್ಕಿ ನಪಂ ಸದಸ್ಯ ಪುತ್ತು ಬಾವ, ಇಕ್ಬಾಲ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.
ಹಳೆಯಂಗಡಿಯ ಬೊಳ್ಳೂರು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಅಲ್-ಫಿತರ್ ಪ್ರಯುಕ್ತ ಖತೀಬ್ ಹಾಜಿ ಅಲ್ ಅಝ್ಹರ್ ಫೈಝಿ ಅವರ ನೇತೃತ್ವದಲ್ಲಿ ವಿಶೇಷ ಸಾಮೂಹಿಕ ನಮಾಝ್ ನೆರವೇರಿತು.
ಕಿನ್ನಿಗೋಳಿಯ ಗುತ್ತಗಾಡು, ಪಕ್ಷಿಕೆರೆ ಪರಿಸರದಲ್ಲಿ ಈದ್ ಅಲ್-ಫಿತರ್ ಸಂಭ್ರಮದಿಂದ ಆಚರಿಸಲಾಯಿತು.