ಮಂಗಳೂರು: ಬಾವಿಗೆ ಬಿದ್ದ ಯುವಕನ ರಕ್ಷಣೆ
ಮಂಗಳೂರು : ಕುಂಟಿಕಾನದ ಬಳಿ ರಾತ್ರಿ ಬಾವಿಗೆ ಬಿದ್ದಿದ್ದ ಯುವಕನೋರ್ವನನ್ನು ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿದ್ದಾರೆ.
ರಸ್ತೆ ಬದಿಯ ಮನೆಯೊಂದರ ಬಳಿ ಮುಂಜಾನೆ ಯುವಕನ ಬೊಬ್ಬೆ ಕೇಳುತ್ತಿತ್ತು. ಹುಡುಕಾಡಿದಾಗ ಬಾವಿಯಲ್ಲಿ ಯುವಕನೋರ್ವ ಬಿದ್ದಿರುವುದು ಕಂಡು ಬಂದಿದ್ದು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಯಿತು. ಕಾರ್ಯಾಚರಣೆ ನಡೆಸಿ ಯುವಕನನ್ನು ಮೇಲಕ್ಕೆತ್ತಿದ್ದಾರೆ. ಈತ ಸುಮಾರು 26 ವರ್ಷ ವಯಸ್ಸಿನ ಅಸ್ಸಾಂ ಮೂಲದ ಯುವಕನೆಂದು ಗುರುತಿಸಲಾಗಿದೆ.
ಬಾವಿಗೆ ಬಿದ್ದು ಗಾಯಗೊಂಡಿದ್ದ ಈತನನ್ನು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈತ ಅಲ್ಲಿಗೆ ಯಾಕೆ ಬಂದಿದ್ದ, ಹೇಗೆ ಬಾವಿಗೆ ಬಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ ಕದ್ರಿ ಅಗ್ನಿಶಾಮಕ ಠಾಣಾಧಿಕಾರಿ ಸುನಿಲ್ ಕುಮಾರ್, ಸಿಬ್ಬಂದಿ ಸುದರ್ಶನ್, ಚಂದ್ರಹಾಸ ಸಾಲ್ಯಾನ್, ಚಾಲಕ ದಯಾಕರ್, ಪ್ರದೀಪ್, ಪ್ರಭಾಕರ್, ಗೃಹರಕ್ಷಕ ಸಿಬ್ಬಂದಿ ಕನಕಪ್ಪ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.