ಡೊಂಗರಕೇರಿ: ರಸ್ತೆ ಪಕ್ಕ ಅನಧಿಕೃತ ಹೂಕುಂಡ; ತೆರವಿಗೆ ಆಗ್ರಹ
Update: 2022-05-04 21:02 IST
ಮಂಗಳೂರು: ನಗರದ ಡೊಂಗರಕೇರಿ ವಾರ್ಡಿನ ಕೆನರಾ ಹೈಸ್ಕೂಲ್ ಸಮೀಪದ ರಸ್ತೆಯ ಪಕ್ಕ ಅನಧಿಕೃತವಾಗಿ ಇಡಲಾದ ಹೂಕುಂಡವನ್ನು ತೆರವುಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕಿ ಮಂಜುಳಾ ನಾಯಕ್ ಆಗ್ರಹಿಸಿದ್ದಾರೆ.
ಅಕ್ರಮವಾಗಿ ಹೂಕುಂಡವನ್ನಿಟ್ಟ ಸ್ಥಳದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಮಂಜುಳಾ ನಾಯಕ್ ರಸ್ತೆ ಪಕ್ಕ ಅನಧಿಕೃತವಾಗಿ ಹೂಕುಂಡವನ್ನಿಟ್ಟಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಕಾರ್ಪೊರೇಟರ್, ಮನಪಾ ಆಯುಕ್ತರು, ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಮನಪಾ ಆಯುಕ್ತರು ಯಾರದೋ ಒತ್ತಡಕ್ಕೆ ಮಣಿದಿದ್ದಾರೆ. ಆ ಹಿನ್ನೆಲೆ ಯಲ್ಲಿ ಈ ದಿನ ಪ್ರತಿಭಟನೆ ನಡೆಸಿ ಹೂಕುಂಡವನ್ನು ತೆರವುಗೊಳಿಸಲು ಮುಂದಾಗಿದ್ದೆವು. ಆದರೆ ಬಂದರು ಪೊಲೀಸ್ ಠಾಣೆಯ ಅಧಿಕಾರಿಗಳ ಮನವಿಯ ಮೇರೆಗೆ ಹೂಕುಂಡ ತೆರವುಗೊಳಿಸಿಲ್ಲ. ಹಾಗಾಗಿ 10 ದಿನದೊಳಗೆ ಹೂಕುಂಡ ತೆರವುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.