×
Ad

ಬೆಂಗಳೂರು : ವಂಚನೆ ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2022-05-07 09:49 IST

ಬೆಂಗಳೂರು : ಶೇರ್‌ ಮಾರ್ಕೆಟ್‌ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಲು ಟಿಪ್ಸ್‌ ನೀಡುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ವಂಚಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಈಶಾನ್ಯ ವಿಭಾಗದ ಸಿಎಎನ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಿವಾಸಿಗಳಾದ ರಹ್ಮತುಲ್ಲಾ ಕೆ.ಎಸ್.‌(29), ಎಂ.ಸಿ. ಮಲ್ಲಯ್ಯಸ್ವಾಮಿ (29), ಸಿ. ದುರ್ಗಪ್ಪ (28) ಎಂದು ಪೊಲೀಸರು ತಿಳಿಸಿದ್ದಾರೆ.

ಹಣವನ್ನು ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡಿಕೆ ಮಾಡಿದ್ದರೆ ಮೇಕ್‌ ಇನ್‌ ಪ್ರಾಫಿಟ್‌ ಎಂಬ ಕಂಪೆನಿಯಿಂದ ಟಿಪ್ಸ್‌ ಪಡೆದರೆ ಲಾಭ ಆಗುತ್ತದೆ ಎಂದು ಹೇಳಿ ನಂಬಿಸಿ ವಂಚಿಸುತ್ತಿದ್ದರು ಎಂದು ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು.

ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿ, ಮೂರು ಮೊಬೈಲ್‌ ಫೋನ್‌ ಮತ್ತು 6 ಸಿಮ್‌ ಕಾರ್ಡ್‌ ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News