×
Ad

ಸುರತ್ಕಲ್: ಕಾರು ಢಿಕ್ಕಿ; ಬೈಕ್ ಸವಾರ ಮೃತ್ಯು

Update: 2022-05-09 22:06 IST

ಸುರತ್ಕಲ್ : ಬೈಕ್ ಗೆ  ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣೆಯ ಸಮೀಪ ವರದಿಯಾಗಿದೆ.

ಮೃತಪಟ್ಟವರನ್ನು ಸ್ಥಳೀಯ ನಿವಾಸಿ ರಮೇಶ್ ಕುಮಾರ್ ಎಂದು ತಿಳಿದು ಬಂದಿದೆ. ಆರೋಪಿ ಕಾರು ಚಾಲಕ ದರ್ಶನ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ರಮೇಶ್ ಕುಮಾರ್ ಅವರು ಸುರತ್ಕಲ್ ಪೊಲೀಸ್ ಠಾಣಾ‌ ವ್ಯಾಪ್ತಿಯ ಗೋವಿಂದ ದಾಸ ವೃತ್ತದ ಬಳಿ ರಾ.ಹೆದ್ದಾರಿಯಿಂದ ಮಹಾಲಿಂಗೇಶ್ವರ‌‌ ಶಾಲೆಯ ಬಳಿ ತನ್ನ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ‌  ಮಂಗಳೂರು ಕಡೆಯಿಂದ ಸುರತ್ಕಲ್ ಕಡೆ ದರ್ಶನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಕಾರು ಚಾಲಕ ಅಜಾಗರೂಕತೆ ಮತ್ತು ಅಪಾಯಕಾರಿಯಾಗಿ ಕಾರು ಚಾಲಾಯಿಸುತ್ತಿದ್ದ ಪರಿಣಾಮ ರಮೇಶ್ ಅವರು ಸಮಚರಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. 

ಘಟನೆಯಿಂದ ರಸ್ತೆಗೆ ಎಸೆಯಲ್ಪಟ್ಟ ರಮೇಶ್ ಅವರನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರು ಅದಾಗಲೇ ರಮೇಶ ಮೃತ ಪಟ್ಟಿದ್ದರು ಎಂದು ತಿಳಿದು ಬಂದಿದೆ. 

ಈ ಸಂಬಂಧ ರೋಶನ್ ಪ್ರಸಾದ್ ಎಂಬವರು ನೀಡಿದ ದೂರಿನಂತೆ ್ರಕರಣ ದಾಖಲೊಸಿಕೊಂಡಿರುವ ಮಂಗಳೂರು ಉತ್ತರ ಸಂಚಾರ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ‌ಮುಂದು ವರಿಸಿದ್ದಾರೆ ಎಂಸು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News