ಸಾಲ್ಮರ: ಮೇ 10ರಂದು 'ನೂರೇ ಅಜ್ಮೀರ್' ಕಾರ್ಯಕ್ರಮ

Update: 2022-05-09 17:55 GMT

ಪುತ್ತೂರು : ಇಲ್ಲಿನ ಸಾಲ್ಮರ ಸಾದಾತ್ ಮಹಲ್ ನಲ್ಲಿರುವ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯ ಅಧೀನದ ಮರಿಯಂ ಹಿಫ್ಲುಲ್ ಖುರ್ ಆನ್ ಕಾಲೇಜ್ ನ ವತಿಯಿಂದ 'ನೂರೇ ಅಜ್ಮೀರ್ ' ಆಧ್ಯಾತ್ಮಿಕ ಸಂಗಮ ಮತ್ತು ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ಮೇ 10 ರಂದು ಸಾಲ್ಮರ ಮೌಂಟನ್ ವ್ಯೂ ಶಾಲಾ ಮೈದಾನದಲ್ಲಿ ಜರಗಲಿದೆ.

ಸಂಜೆ ಗಂಟೆ 6 ಕ್ಕೆ  ಸಯ್ಯಿದ್ ಯಹ್ಯಾ ಹಾದಿ ತಂಙಳ್ ಸಾಲ್ಮರ ಅವರ ನೇತೃತ್ವದಲ್ಲಿ ಮರ್ಹೂಂ ಸಯ್ಯಿದ್ ಹಸನ್ ಕೋಯ ತಂಙಳ್ ರವರ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬಳಿಕ ಖ್ಯಾತ ವಿದ್ವಾಂಸ , ಸೂಫಿವರ್ಯ ವಲಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ  'ನೂರೇ ಅಜ್ಮೀರ್, ಧಾರ್ಮಿಕ ಪ್ರಭಾಷಣ, ಹಾಗೂ ದುಆ ಮಜ್ಲಿಸ್ ನಡೆಯಲಿದ್ದು ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್  ಅಧ್ಯಕ್ಷತೆ ವಹಿಸುವರು.

ಕೆ.ಆರ್ ಹುಸೈನ್ ದಾರಿಮಿ. ಸಯ್ಯಿದ್ ಎಸ್.ಎಂ.ತಂಙಳ್ ಸಾಲ್ಮರ, ಸಯ್ಯಿದ್ ಹಬೀಬುರ್ರಹ್ಮಾನ್ ತಂಙಳ್ ಮುಕ್ವೆ , ಸಯ್ಯಿದ್ ಜುನೈದ್ ಜಿಫ್ರಿ ತಂಙಳ್ ಆತೂರು, ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡು, ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಂಬ್ರಾಣ ಉಸ್ತಾದ್, ಮಹ್ಮೂದುಲ್ ಫೈಝಿ ವಾಲೆಮುಂಡೋವು, ಉಸ್ಮಾನುಲ್ ಫೈಝಿ ಉಳ್ಳಾಲ, ಅಬ್ಬಾಸ್ ಫೈಝಿ ಪುತ್ತಿಗೆ, ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಉನೈಸ್ ಫೈಝಿ ಕೂರ್ನಡ್ಕ, ಅಬ್ದುಲ್ ಹಮೀದ್ ಬಾಖವಿ ಕಬಕ, ಸಿರಾಜುದ್ದೀನ್ ಸಖಾಫಿ ಬನ್ನೂರು, ಕೆ.ಪಿ.ಅಹ್ಮದ್ ಹಾಜಿ ಆಕರ್ಷನ್ ಮೊದಲಾದ ಹಲವಾರು ಉಲಮಾ, ಉಮರಾ ನಾಯಕರು,ಸಾದಾತ್ ಗಳು, ಸಾಮಾಜಿಕ ಗಣ್ಯರು ಸಭೆಯಲ್ಲಿ ಭಾಗವಹಿಸುವರು ಎಂದು ಸಂಸ್ಥೆಯ ಮುದರ್ರಿಸ್ ಅಬ್ದುಲ್ ಕರೀಂ ದಾರಿಮಿ ಕುಂಬ್ರ ಹಾಗೂ ವ್ಯವಸ್ಥಾಪಕರಾದ ಅನ್ವರ್ ಮುಸ್ಲಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News