ರೂಮಿಗೆ ನುಗ್ಗಿ ಲಕ್ಷಾಂತರ ರೂ. ಹಣ ಕಳವು
Update: 2022-05-10 21:43 IST
ಮಲ್ಪೆ : ಮಲ್ಪೆ ಕೊಳ ಎಂಬಲ್ಲಿನ ರೂಮಿಗೆ ಮೇ 9ರಂದು ಬೆಳಗ್ಗೆ ನುಗ್ಗಿದ ಕಳ್ಳರು, ಮೀನುಗಾರಿಕೆಗೆ ಸಂಬಂಧಿಸಿ ಲಕ್ಷಾಂತರ ರೂ. ಹಣವನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಮೇ ೭ ಮತ್ತು ೮ರಂದು ಮೀನು ವ್ಯಾಪಾರದಿಂದ ಬಂದ ಒಟ್ಟು ೧೦.೩೦ಲಕ್ಷ ರೂ. ಹಣವನ್ನು ಎಸ್‌ಡಿಡಿಕೆ ಮೀನುಪಾರ್ಟಿಯ ರೈಟರ್ ಸುರೇಶ್ ಲಮಾಣಿ ಕೊಳದಲ್ಲಿರುವ ತನ್ನ ರೂಮಿನಲ್ಲಿ ಬಾಕ್ಸಿನ ಒಳಗೆ ಇಟ್ಟು ಮಲ್ಪೆ ಬಂದರಿಗೆ ಕೆಲಕ್ಕೆ ಹೋಗಿದ್ದರು. ಈ ವೇಳೆ ರೂಮಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಬಾಕ್ಸ್ ನಲ್ಲಿ ಇಟ್ಟ ೧೦.೩೦ಲಕ್ಷ ರೂ. ಪೈಕಿ ೮.೯೦ಲಕ್ಷ ರೂ. ಕಳವು ಮಾಡಿ, ಉಳಿದ ೧.೪೦ಲಕ್ಷ ರೂ. ಬಾಕ್ಸ್‌ನಲ್ಲಿಯೇ ಇಟ್ಟು ಹೋಗಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.