×
Ad

ಅಸಾನಿ ಚಂಡಮಾರುತ ಎಫೆಕ್ಟ್; ಕಾಪುವಿನಲ್ಲಿ ಬೂತಾಯಿ ಸುಗ್ಗಿ

Update: 2022-05-13 21:24 IST

ಕಾಪು : ಅಸಾನಿ ಚಂಡಮಾರುತದ ಪರಿಣಾಮ ಉಡುಪಿ ಜಿಲ್ಲೆಯ ಸಮುದ್ರದಲ್ಲಿ ಬೂತಾಯಿ ಮೀನು ವ್ಯಾಪಾಕವಾ ಗಿದ್ದು, ಟನ್‌ಗಟ್ಟಲೆ ಮೀನುಗಳು ಬಲೆಗೆ ಬೀಳುತ್ತಿರುವುದರಿಂದ ಮೀನುಗಾರರು ಮಾತ್ರವಲ್ಲದೆ ಮತ್ಸ್ಯ ಪ್ರಿಯರಲ್ಲೂ ಸಂತಸ ಮೂಡಿಸಿದೆ.

ಕಾಪು ಕೈಪುಂಜಾಲು ಓಂ ಸಾಗರ್ ಜೋಡು ದೋಣಿಯ ಬಲೆಗೆ ಟನ್‌ಗಟ್ಟಲೆ ಬೂತಾಯಿ ಮೀನುಗಳು ಬಲೆಗೆ ಬಿದ್ದಿವೆ. ನಿರೀಕ್ಷೆಗೂ ಮೀರಿ ಸುಮಾರು 30 ಟನ್‌ಗೂ ಅಧಿಕ ಮೀನು ಈ ದೋಣಿಯವರಿಗೆ ದೊರೆತಿದೆ. ಈ ಮೀನುಗಳು 30 ಲಕ್ಷ ರೂ.ಗೂ ಅಧಿಕ ಬೆಲೆಗೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಚಂಡ ಮಾರುತದ ಕಾರಣದಿಂದ ಕಡಲು ಪ್ರಕ್ಷ್ಯುಬ್ದಗೊಂಡಿದ್ದು ಗಂಗೊಳ್ಳಿಯಿಂದ ಮಂಗಳೂರು ಕರಾವಳಿಯವರೆಗೆ ಬೂತಾಯಿ ಮೀನು ವ್ಯಾಪಾಕವಾಗಿ ಕಂಡುಬರುತ್ತಿವೆ. ಇದರಿಂದ ಕರಾವಳಿಯಲ್ಲಿ ಬೂತಾಯಿ ಮೀನಿನ ಸುಗ್ಗಿ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿದ್ದು, ಮೀನುಗಳು ಹಾರುವ ದೃಶ್ಯಗಳು ಕಂಡುಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News