ಡಾ. ಫಾತಿಮಾ ರಈಸಗೆ ಕೆಎಂಸಿ ಮಂಗಳೂರಿನ ಶ್ರೇಷ್ಠ ವಿದ್ಯಾರ್ಥಿನಿ ಚಿನ್ನದ ಪದಕ ಪ್ರದಾನ

Update: 2022-05-13 17:26 GMT

ಮಂಗಳೂರು: ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಫಾತಿಮಾ ರಈಸ ಅವರಿಗೆ 2021ನೇ ಸಾಲಿನ ರೇಡಿಯೋ ಡಯಗ್ನೋಸಿಸ್ ಎಂಡಿ ವಿಭಾಗದ ಅತ್ಯುತ್ತಮ ವಿದ್ಯಾರ್ಥಿಗೆ ನೀಡಲಾಗುವ ಪ್ರಫುಲ್ಲ ಎಸ್ ಹೆಗ್ಡೆ ದತ್ತಿ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಮಾಜಿ ಉಪಕುಲಪತಿ ಡಾ.ಎಚ್.ಎಸ್.ಬಳ್ಳಾಲ್ ಅವರು ಸ್ಥಾಪಿಸಿರುವ ಈ ಚಿನ್ನದ ಪದಕವನ್ನು ಮಂಗಳೂರಿನ ಡಾ. ಟಿಎಂಎ ಪೈ ಇಂಟರ್‌ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಇತ್ತೀಚಿಗೆ ನಡೆದ ಕೆಎಂಸಿ ಕಾಲೇಜಿನ ಕಾಲೇಜು ವಾರ್ಷಿಕೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು.

ದೋಹ ಕತರ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಡಾ. ಫಾತಿಮಾ ರಈಸ ಸದ್ಯ ಮಂಗಳೂರು ಕೆಎಂಸಿಯಲ್ಲಿ  ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿ ಮುಮ್ತಾಝ್ ಹುಸೇನ್ ಹಾಗು ಇಶ್ರತ್ ಜಹಾನ್ ಖಾನ್ ದಂಪತಿಯ ಪುತ್ರಿಯಾಗಿರುವ ಡಾ. ಫಾತಿಮಾ ಅವರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗು ನರ ಆರೋಗ್ಯ ತಜ್ಞ ಡಾ. ಸಫ್ವಾನ್ ಅಹ್ಮದ್ ಅವರ ಪತ್ನಿ.

ಡಾ. ಫಾತಿಮಾ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಕೆಎಂಸಿ ಮಂಗಳೂರು ಇದರ ರೇಡಿಯೋ ಡಯಗ್ನೋಸಿಸ್ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ರೈ ಅವರು ಮಾಹೆ ಉಪಕುಲಪತಿ ಲೆ.ಜ. (ಡಾ.) ಎಂಡಿ ವೆಂಕಟೇಶ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News