ಪ್ರಧಾನಿಯಾಗಿ ಮೋದಿಯ ದಾಖಲೆಗಳು ಅವರು ʼಹಿಂದೂ ವಿರೋಧಿʼ ಎಂದು ಸೂಚಿಸುತ್ತದೆ: ಸುಬ್ರಮಣಿಯನ್‌ ಸ್ವಾಮಿ

Update: 2022-05-17 17:05 GMT

ಹೊಸದಿಲ್ಲಿ: ಬಿಜೆಪಿ ಪಕ್ಷದ ಹಿರಿಯ ನಾಯಕನಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರಕಾರದ ಕೆಲ ಧೋರಣೆಗಳನ್ನು ಕಟುವಾಗಿ ಟೀಕಿಸುವ ಸುಬ್ರಮಣಿಯನ್‌ ಸ್ವಾಮಿ ಇದೀಗ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ವೈಖರಿಗಳಿ ಹಿಂದೂ ವಿರೋಧಿಯಾಗಿವೆ ಎಂದು ಹೇಳಿಕೆ ನೀಡಿದ್ದಾರೆ.

ಟ್ವಿಟರ್‌ ನಲ್ಲಿ "ಬಿಜೆಪಿ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಎತ್ತಿ ಹಿಡಿಯುವುದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಸಾಧನೆಗಳು ಹಿಂದೂ ವಿರೋಧಿಯಾಗಿದೆ. ಇದಕ್ಕೆ ಉದಾಹರಣೆಗಳೆಂದರೆ, ರಾಮಮಂದಿರ ಮೇಲಿನ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿಳಂಬಿಸಲು ಪ್ರಯತ್ನಿಸುವುದು, ರಾಮಸೇತುವಿನ ಪ್ರಾಚೀನ ಪರಂಪರೆಯ ಸ್ಥಾನಮಾನಗಳ ಕುಸಿತ, ಉತ್ತರಾಖಂಡ್‌ ನ ದೇವಾಲಯಗಳ ಸ್ವಾಧೀನ, 1991ರ ಪೂಜಾಸ್ಥಳಗಳ ಕಾಯ್ದೆಯನ್ನು ಹಿಂಪಡೆಯಲು ನಿರಾಕರಿಸಲಾಗಿದೆ" ಎಂದು ಬರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News