×
Ad

ಹೊಯ್ಗೆ ಬಝಾರ್: ಭಾರೀ ಮಳೆಗೆ ಮರದ ಮಿಲ್ ಕುಸಿತ

Update: 2022-05-19 15:34 IST

ಮಂಗಳೂರು, ಮೇ 19: ನಗರದ ಹೊಯ್ಗೆ ಬಝಾರ್‌ನಲ್ಲಿರುವ ‘ಬಾವಾ ವುಡ್ ಇಂಡಸ್ಟ್ರೀಸ್’ ಎಂಬ ಹೆಸರಿನ ಮರದ ಮಿಲ್ ಬುಧವಾರ ರಾತ್ರಿ ಕುಸಿದಿದೆ. ಇದರಿಂದ ಅಪಾರ ನಷ್ಟವಾಗಿದೆ.

ಮಂಜೇಶ್ವರದ ಕೆ.ಅಬ್ದುಲ್ಲಾ ಎಂಬವರಿಗೆ ಸೇರಿರುವ ಈ ಮರದ ಮಿಲ್ ಹೆಂಚಿನಿಂದ ಕೂಡಿದೆ. ಬುಧವಾರ ಸುರಿದ ಭಾರೀ ಮಳೆಯ ನೀರು ಗೋಡೆಗೆ ಬಡಿದು ಬಿರುಕು ಕಾಣಿಸಿಕೊಂಡಿತು ಎನ್ನಲಾಗಿದೆ. ರಾತ್ರಿ ಸುಮಾರು 9 ಗಂಟೆಯು ವೇಳೆಗೆ ಗೋಡೆ ಕುಸಿದ ಪರಿಣಾಮ ಮಿಲ್‌ನೊಳಗಿದ್ದ ಮರಗಳು ಮತ್ತು ಯಂತ್ರಗಳಿಗೆ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News