ಮೇ 23ರಿಂದ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Update: 2022-05-20 16:47 GMT

ಮಂಗಳೂರು : ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರ ತೊಂದರೆ ನೀಡುತ್ತಿ ರುವ ಸರಕಾರಿ ಅಧಿಕಾರಿ ಅಥವಾ ನೌಕರರ ವಿರುದ್ದ ಸಾರ್ವಜನಿಕರಿಂದ ದೂರು ಪಡೆಯಲು ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕರು, ಉಪಾಧೀಕ್ಷಕರು, ನಿರೀಕ್ಷಕರು ಮೇ.೨೩ರಿಂದ ಜಿಲ್ಲೆಯ ವಿವಿಧ ತಾಲೂಕುಗಳ ಪ್ರವಾಸ ಕೈಗೊಂಡಿದ್ದಾರೆ.

ಮೇ 23ರಂದು ಪೂ.11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಂಗಳೂರು ನಗರದ ತಹಶೀಲ್ದಾರರ ಕಚೇರಿಯಲ್ಲಿ, ಮೇ 25ರ ಪೂ.11 ರಿಂದ ಮಧ್ಯಾಹ್ನ ೧ರವರೆಗೆ ಬಂಟ್ವಾಳ ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ, ಮೇ ೨೭ರ ಪೂ.೧೧ರಿಂದ ಮಧ್ಯಾಹ್ನ ೧ರವರೆಗೆ ಪುತ್ತೂರು ತಾಲೂಕಿನ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲಿದ್ದಾರೆ.

ಉಳಿದಂತೆ ಭರ್ತಿಗೊಳಿಸಿದ ಅರ್ಜಿಯನ್ನು ಅಫಿದಾವಿತ್ ಮಾಡಿಸಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಕಚೇರಿಗೆ ಅಥವಾ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಬೀದಿಯಲ್ಲಿರುವ ಬಹುಮಹಡಿ ಕಟ್ಟಡದ ಲೋಕಾಯುಕ್ತ ಕಚೇರಿಗೆ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಪೊಲೀಸ್ ಅಧೀಕ್ಷಕರ ಕಚೇರಿ ದೂ.ಸಂ: ೦೮೨೪-೨೯೫೦೯೯೭, ೯೨೪೩೪೫೬೬೨೯, ಪೊಲೀಸ್ ಉಪಾಧೀಕ್ಷಕರ-೧ ಕಚೇರಿ ದೂ.ಸಂ:೦೮೨೪-೨೪೫೩೪೨೦, ೯೪೪೮೬೩೫೩೪೮, ಪೊಲೀಸ್ ಉಪಾಧೀಕ್ಷಕರ-೨ ಕಚೇರಿ ದೂ.ಸಂ:೦೮೨೪-೨೪೫೩೪೨೦, ೭೦೧೯೯೬೭೦೬೧, ಪೊಲೀಸ್ ನಿರೀಕ್ಷಕರ ಕಚೇರಿ ದೂ.ಸಂ:೦೮೨೪-೨೪೨೭೨೩೭, ೯೪೪೮೪೬೧೮೧೬ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News