ಪ್ರಿಯದರ್ಶಿನಿ ಸಹಕಾರ ಸಂಘ ಹಳೆಯಂಗಡಿ; ವಾರ್ಷಿಕ ಮಹಾ ಸಭೆ

Update: 2022-05-22 15:47 GMT

ಮಂಗಳೂರು : ಕೇವಲ 10 ತಿಂಗಳ ಅವಧಿಯಲ್ಲಿ ಸಂಘವು ಉತ್ತಮ ರೀತಿಯ ಸಾಧನೆ ಗೈದಿದ್ದು, ಸಂಘದ ಸದಸ್ಯರ ಸಹಕಾರದಿಂದ ಪ್ರಥಮ ವರ್ಷದಲ್ಲಿಯೇ ಲಾಭ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ್ ಬೆರ್ನಾರ್ಡ್ ನುಡಿದರು.

ಅವರು ಪ್ರಿಯದರ್ಶಿನಿ ಸಹಕಾರ ಸಂಘ ಹಳೆಯಂಗಡಿ ಇದರ 2021-2022 ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಸಂಘವು 660 ಸದಸ್ಯರನ್ನು ಹೊಂದಿದ್ದು, 26.57 ಲಕ್ಷ  ರೂ. ಪಾಲು ಬಂಡವಾಳ, 7,30,70,589 ರೂ. ಠೇವಣಿ ಹಾಗೂ 5,44,95,773‌ ರೂ. ಹೊರಬಾಕಿ ಸಾಲ ಇದೆ. 40,78,975 ರೂ. ಮೌಲ್ಯದ ಪೀಠೋಪಕರಣಗಳ ಜೊತೆಗೆ ಸ್ಥಿರಾಸ್ತಿಯನ್ನು ಹೊಂದಿರುತ್ತದೆ. ಸದ್ರಿ ಸಾಲಿನಲ್ಲಿ ಸಂಘವು 14,277 ರೂ. ಲಾಭಾಂಶ ಗಳಿಸಿದ್ದು ಇದು ಸಂಘದ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ್ ಜೆ. ಶೆಟ್ಟಿಗಾರ್, ಜೈಕೃಷ್ಣ, ಗಣೇಶ್ ಪ್ರಸಾದ್ ದೇವಾಡಿಗ, ಮಿರ್ಜಾ ಅಹ್ಮದ್, ಚಿರಂಜೀವಿ ಅಂಚನ್, ಶೆರಿಲ್ ಅಯೋನ ಐಮನ್, ಹರೀಶ್ ಎನ್. ಪುತ್ರನ್ ಸಸಿಹಿತ್ಲು, ನವೀನ್ ಸಾಲ್ಯಾನ್ ಪಂಜ, ಮೊದಲಾದವರು ಇದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ವರದಿ ಮಂಡಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News