ಸೆಲ್ಫಿ ಗೀಳಿಗೆ ಬಲಿಯಾಗುತ್ತಿರುವ ಯುವಜನತೆ

Update: 2022-05-23 18:33 GMT

ಮಾನ್ಯರೇ,
ಮೊಬೈಲ್ ಈಗ ಯುವಜನತೆಯ ಅತ್ಯಾಕರ್ಷಕ ವಸ್ತುವಾಗಿದೆ. ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಇದು ಆವರಿಸಿಕೊಂಡಿದೆ. ಪಾಲಕರು ಮೊಬೈಲ್ ಕೊಡಿಸಿದರೆ ಮಾತ್ರ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಮೊಬೈಲ್‌ನಿಂದಲೇ ದಿನೇ, ದಿನೇ ಪ್ರಾಣ ಹಾನಿ ಹೆಚ್ಚುತ್ತಿದೆ. ಯುವಕ-ಯುವತಿಯರು ಮತ್ತು ವಿದ್ಯಾರ್ಥಿಗಳು ಕೂಡಾ ಜಾಲತಾಣಗಳಲ್ಲಿನ ಲೈಕ್, ಕಮೆಂಟ್‌ಗಳಿಗಾಗಿ ಪ್ರವಾಸಿ ತಾಣಗಳಲ್ಲಿ, ಬೆಟ್ಟದ ತುತ್ತ ತುದಿಗಳಲ್ಲಿ, ನೀರಿನ ಹರಿವಿನ ವೇಗದಲ್ಲಿ, ಬೈಕ್ ರೈಡಿಂಗ್ ಮಾಡುವಾಗ, ಬದಿಯಲ್ಲಿ ಟ್ರೈನ್ ಹೋಗುವಾಗ ಸೆಲ್ಫಿ ಸೆರೆ ಹಿಡಿಯುವ ಹುಚ್ಚು ಸಾಹಸ ಮಾಡಿ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಅಪಾಯಕಾರಿ, ಭಯಾನಕ ಸ್ಥಳಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಜೊತೆಗೆ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸೆಲ್ಫಿ ಗೀಳು ತಪ್ಪಿಸಬೇಕು.
 

Similar News