ಚೆಸ್ಸಬಲ್ ಮಾಸ್ಟರ್ಸ್‌: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಸೆಮಿಫೈನಲ್‌ಗೆ

Update: 2022-05-24 04:42 GMT

ಹೊಸದಿಲ್ಲಿ: ಚೀನಾದ ವೈ ಯಿ ಅವರನ್ನು 2.5-1.5 ರಿಂದ ಸೋಲಿಸಿದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್.  ಪ್ರಜ್ಞಾನಂದ ಅವರು ಮೆಲ್ಟ್‌ವಾಟರ್ ಚಾಂಪಿಯನ್ಸ್ ಚೆಸ್ ಟೂರ್ ಚೆಸ್ಸಬಲ್ ಮಾಸ್ಟರ್ಸ್ 2022 ಆನ್‌ಲೈನ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ತನ್ನ  ಸ್ಥಾನ ಕಾಯ್ದಿರಿಸಿದರು.

 16 ರ ಹರೆಯದ ಪ್ರಜ್ಞಾನಂದ ಅವರು ಸೆಮಿಫೈನಲ್‌ನಲ್ಲಿ ಅನೀಶ್ ಗಿರಿ (ನೆದರ್ಲೆಂಡ್ಸ್) ವಿರುದ್ಧ ಸೆಣಸಲಿದ್ದಾರೆ.

ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ವಿಶ್ವದ ನಂ.1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್‌ಸನ್ ಚೀನಾದ ಡಿಂಗ್ ಲಿರೆನ್ ಅವರನ್ನು ಎದುರಿಸಲಿದ್ದಾರೆ.

ಗಿರಿ ಹಾಗೂ  ಕಾರ್ಲ್‌ಸೆನ್ ಅವರು ಆರ್ಯನ್ ಟೋರಿ (ನಾರ್ವೆ) ಮತ್ತು ಡೇವಿಡ್ ಆಂಟನ್ ಗುಜ್ಜಾರೊ (ಸ್ಪೇನ್) ವಿರುದ್ಧ 2.5-0.5 ಅಂತರದಲ್ಲಿ ಜಯಗಳಿಸಿದರು,

ಕ್ವಾರ್ಟರ್‌ಫೈನಲ್‌ನಲ್ಲಿ ಲಿರೆನ್ ಅಝರ್‌ಬೈಜಾನ್‌ನ ಶಖ್ರಿಯಾರ್ ಮಮೆಡಿಯಾರೊವ್ ಅವರನ್ನು 2.5-1.5 ರಿಂದ ಸೋಲಿಸಿದರು.

ಪ್ರಜ್ಞಾನಂದ  ಅವರು ಪ್ರಾಥಮಿಕ ಹಂತದಲ್ಲಿ ಆರನೇ ಸುತ್ತಿನಲ್ಲಿ ಕಾರ್ಲ್‌ಸನ್ ಅವರನ್ನು ಸೋಲಿಸುವ ಮೂಲಕ ಸಂಚಲನ ಮೂಡಿಸಿದ್ದರು. ಅವರು ಅನೀಶ್, ಕಾರ್ಲ್‌ಸನ್ ಹಾಗೂ ಡಿಂಗ್ ಲಿರೆನ್ ನಂತರ ನಾಲ್ಕನೇ ಸ್ಥಾನ ಪಡೆದರು.

16ರ ವಯಸ್ಸಿನವರ ಸ್ಪರ್ಧೆಯಲ್ಲಿದ್ದ ಇನ್ನಿಬ್ಬರು ಭಾರತೀಯ ಆಟಗಾರರಾದ  ಪಿ.  ಹರಿಕೃಷ್ಣ ಹಾಗೂ  ಗುಜರಾತಿ ಅಗ್ರ-8ಕ್ಕಿಂತ ಹೊರಗುಳಿದು  ನಾಕೌಟ್ ಹಂತಕ್ಕೆ ತಲುಪಲು  ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News