ಎಸಿ ರೈಲುಗಳಲ್ಲಿ ಹಾಸಿಗೆ ಸೇವೆ ಪುನಾರಂಭ

Update: 2022-05-25 17:39 GMT

ಬೆಂಗಳೂರು, ಮೇ 25: ಕೊರೋನ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಹೊದಿಕೆ ಮತ್ತು ಹಾಸಿಗೆಗಳ ಸೇವೆಯನ್ನು ನಿಲ್ಲಿಸಿದ್ದ ಭಾರತೀಯ ರೈಲ್ವೇ ಇದೀಗ ಈ ಸೇವೆಗಳನ್ನು ಮರು ಆರಂಭ ಮಾಡುತ್ತಿದೆ. ರಾಜ್ಯದಿಂದ ಹೊರರಾಜ್ಯಗಳಿಗೆ ಸಂಚರಿಸುವ 14 ರೈಲುಗಳಲ್ಲಿ ಎಸಿ ಸ್ಲೀಪರ್ ಬೋಗಿಗಳ ಪ್ರಯಾಣಿಕರಿಗೆ ಈ ಸೇವೆ ದೊರೆಯಲಿದೆ.

ಸದ್ಯ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರಿಗೆ ಹೊದಿಕೆ ಮತ್ತು ಹಾಸಿಗೆ ಸುರಳಿಯನ್ನು ಪುನಃ ನೀಡಲಾಗುವುದು. ರಾಜಧಾನಿ ಎಕ್ಸ್ ಪ್ರೆಸ್, ಕರ್ನಾಟಕ ಎಕ್ಸ್ ಪ್ರೆಸ್, ಬೆಂಗಳೂರು ಚೆನ್ನೈ ಸೂಪರ್ ಫಾಸ್ಟ್, ಬೆಂಗಳೂರು ಕನ್ಯಾಕುಮಾರಿ ಎಕ್ಸ್ ಪ್ರೆಸ್, ರಾಣಿ ಚೆನ್ನಮ್ಮ ಎಕ್ಸ್‍ಪ್ರೆಸ್, ಬೆಂಗಳೂರು ಬೆಳಗಾವಿ ಸೂಪರ್ ಫಾಸ್ಟ್, ಬೆಂಗಳೂರು ಕಾರವಾರ ಎಕ್ಸ್ ಪ್ರೆಸ್ ರೈಲುಗಳಲ್ಲಿ ಹೊದಿಕೆ ಮತ್ತು ಹಾಸಿಗೆ ನೀಡಲಾಗುತ್ತಿದೆ.

ಅಲ್ಲದೆ, ಯಶವಂತಪುರ ಚಂಢೀಗಢ ಎಕ್ಸ್ ಪ್ರೆಸ್, ಯಶವಂತಪುರ ಕೋಚುವೇಲಿ ಎಕ್ಸ್ ಪ್ರೆಸ್, ಸಂಪರ್ಕ ಕ್ರಾಂತಿ ಸೂಪರ್ ಫಾಸ್ಟ್, ಸಂಪರ್ಕ ಕ್ರಾಂತಿ ವೀಕ್ಲಿ ಎಕ್ಸ್ ಪ್ರೆಸ್, ಯಶವಂತಪುರ ಸರೈರೊಹಿಲ್ಲಾ ಎಕ್ಸ್ ಪ್ರೆಸ್, ಸ್ವರ್ಣಜಯಂತಿ ಎಕ್ಸ್ ಪ್ರೆಸ್, ಹುಬ್ಬಳ್ಳಿ ಹೈದರಾಬಾದ್ ಎಕ್ಸ್ ಪ್ರೆಸ್ ಸೇರಿ 14 ರೈಲುಗಳಲ್ಲಿ ಹೊದಿಕೆ ಮತ್ತು ಹಾಸಿಗೆ ನೀಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News