ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್‍; ಮಂಗಳೂರಿನ ಸಿಯಾ ಶೆಟ್ಟಿಗೆ ಬೆಳ್ಳಿ ಪದಕ

Update: 2022-05-26 04:14 GMT
ಸಿಯಾ ಶೆಟ್ಟಿ

ಮಂಗಳೂರು, ಮೇ 26: ಕಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್‌ ಬೆಂಚ್ ಪ್ರೆಸ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ.

ದೇಶವನ್ನು ಪ್ರತಿನಿಧಿಸಿದ ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಏಳಿಂಜೆಯ ಸಿಯಾ ಶೆಟ್ಟಿ ಬೆಳ್ಳಿ ಪದಕ ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಇವರು ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಮಂಗಳೂರಿನ ಎಎಸ್ಐ ವಿಜಯ ಕಾಂಚನ್ ಮತ್ತು ಈಶ್ವರ್ ಕಟೀಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News