×
Ad

ಯುವಕನ ಕೊಲೆ ಯತ್ನ ಪ್ರಕರಣ: ಆರೋಪಿಗಳ ಬಂಧನ

Update: 2022-05-27 21:15 IST

ಉಳ್ಳಾಲ: ನಾಲ್ಕು ದಿನಗಳ ಹಿಂದೆ ಹಣದ ವಿಚಾರಕ್ಕೆ ಸಂಬಂಧಿಸಿ ಉಳ್ಳಾಲ ಠಾಣೆ ವ್ಯಾಪ್ತಿಯ ಉಚ್ಚಿಲ ಮುಳ್ಳುಗುಡ್ಡೆ ಸಮೀಪ ಉಚ್ಚಿಲ ನಿವಾಸಿ ಆರಿಫ್ (38) ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು  ಆರೋಪಿಗಳನ್ನು ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ತಂಡ  ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ.‌

ಬಂಧಿತ ಆರೋಪಿಗಳನ್ನು ಮೇಲಂಗಡಿ ನಿವಾಸಿ ಅಬ್ದುಲ್ ಕರೀಂ (46) ಪೈಝಲ್‍ನಗರ ನಿವಾಸಿಗಳಾದ ಪುಚ್ಚ ನಿಶಾಕ್(25), ಅಶ್ಫಾಕ್(26) ಕಾಟಿಪಳ್ಳ ನಿವಾಸಿ ಉಮ್ಮರ್ ಫಾರೂಕ್(25) ಮಾರ್ನಮಿಕಟ್ಟೆ ನಿವಾಸಿ  ರಿಫಾತ್ (27) ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News