×
Ad

ಉಪ್ಪಿನಂಗಡಿಯಲ್ಲಿ ‘ಮುಕ್ರಿ ಕುಟುಂಬಸ್ಥರ ಸಮ್ಮಿಲನ’

Update: 2022-05-28 14:56 IST

ಉಪ್ಪಿನಂಗಡಿ, ಮೇ 28: ಮುಕ್ರಿ ಮನೆತನದವರನ್ನು ಒಗ್ಗೂಡಿಸುವ ‘ಮುಕ್ರಿ ಕುಟುಂಬಸ್ಥರ ಸಮ್ಮಿಲನ -2022’  ಉಪ್ಪಿನಂಗಡಿಯ ಎಚ್.ಎಂ. ಆಡಿಟೋರಿಯಂನಲ್ಲಿ ಶನಿವಾರ ಜರುಗಿತು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೆಯ್ಯೂರು ಅವರಿಗೆ ಸನ್ಮಾನ, ಮುಕ್ರಿ ಕುಟುಂಬದ ಸಾಧಕರಿಗೆ ಗೌರವಾರ್ಪಣೆ, ಕುಟುಂಬದ ಸಮಗ್ರ ಮಾಹಿತಿಯನ್ನೊಳಗೊಂಡ ಸ್ಮರಣ ಸಂಚಿಕೆ ಬಿಡುಗಡೆ, ಕುಟುಂಬದ ಹಿರಿಯರ ಗುರುತಿಸುವಿಕೆ ಸೇರಿದಂತೆ ಈ ಸಂದರ್ಭ ಹಲವು ಕಾರ್ಯಕ್ರಮಗಳು ನಡೆದವು.

ಹದಿನೆಂಟನೇ ಶತಮಾನದಲ್ಲಿ ಉಪ್ಪಿನಂಗಡಿಗೆ ಆಗಮಿಸಿದ ಮುಕ್ರಿ ಮನೆತನದ ಮಂದಿಯನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದ್ದು, ಮುಕ್ರಿ ಕುಟುಂಬದ ಹಿರಿಯ ವ್ಯಕ್ತಿಯ ಬಳಿಕದ ಅವರ ಸಮಾರು ಮೂರು ಸಾವಿರದ ಮುನ್ನೂರಷ್ಟು ಕುಟುಂಬಸ್ಥರನ್ನು ಈಗಾಗಲೇ ಗುರುತಿಸಲಾಗಿದೆ. ಅವರನ್ನೆಲ್ಲಾ ಈ ಕಾರ್ಯಕ್ರಮದ ಮೂಲಕ ಒಂದೆಡೆ ಸೇರಿಸಲಾಯಿತು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಯಾಕೂಬ್ ಕೆಯ್ಯೂರು, ಮುಕ್ರಿ ಕುಟುಂಬವೆನ್ನುವುದು ಸಾಗರವಿದ್ದಂತೆ ಎಂಬುದು ಇಲ್ಲಿ ಆ ಕುಟುಂಬಸ್ಥರನ್ನು ನೋಡಿದಾಗ ನೆನಪಾಗುತ್ತಿದೆ. ಪ್ರತಿಯೊಂದು ಮನೆತನದವರು ಹೀಗೆ ಚದುರಿ ಹೋಗಿರುವ ತಮ್ಮ ಕುಟುಂಬಸ್ಥರನ್ನು ಹುಡುಕುವ ಪ್ರಯತ್ನ ಮಾಡಿದಾಗ ಪ್ರತಿ ಮನೆತನವೂ ಸಂಘಟನಾತ್ಮಕವಾಗಿ ಗಟ್ಟಿಗೊಳ್ಳುವುದಲ್ಲದೆ, ಅಭಿವೃದ್ಧಿಯನ್ನೂ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಮುಕ್ರಿ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಸುಹೈಲ್, ಹಲವರ ನಿರಂತರ ಪರಿಶ್ರಮದಿಂದ ಮುಕ್ರಿ ಕುಟುಂಬವನ್ನು ಒಗ್ಗೂಡಿಸಲು ಸಾಧ್ಯವಾಗಿದೆ. ಈಗಾಗಲೇ 3,300ರಷ್ಟು ಮಂದಿ ಇದರಲ್ಲಿ ಸೇರಿದ್ದು, ಇನ್ನಷ್ಟು ಮಂದಿ ಮುಂದೆ ಸೇರಲಿದ್ದಾರೆ. ಮುಕ್ರಿ ಫ್ಯಾಮಿಲಿ ಟ್ರಸ್ಟ್ ಕೇವಲ ಒಗ್ಗೂಡುವಿಕೆಗೆ ಮಾತ್ರ ಸೀಮಿತವಾಗಿರದೇ ಹಲವು ಸಮಾಜಮುಖಿ ಯೋಜನೆಗಳನ್ನು ಹಾಕಿಕೊಂಡು ಸಂಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡುತ್ತಿದೆ. ಬಡವರ ಮನೆ ನಿರ್ಮಾಣ, ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿದ್ದು, ಟ್ರಸ್ಟ್ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.

ಮುಕ್ರಿ ಕುಟುಂಬ ಸದಸ್ಯರುಗಳ ಜೀವನ, ಸಮಾಜಮುಖಿ ಸೇವೆಗಳ ಪರಿಚಯವನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಸ್ಮರಣ ಸಂಚಿಕೆಯನ್ನು ಮುಕ್ರಿ ಕುಟುಂಬದ ಹಿರಿಯರಾದ ದಾವೂದ್ ಮುಕ್ರಿ ನೆಕ್ಕಿಲಾಡಿ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ಮುಕ್ರಿ ಕುಟುಂಬದ ಸದಸ್ಯ, ರಾಜ್ಯ ಥ್ರೋಬಾಲ್ ತಂಡದ ನಾಯಕನಾಗಿ ರಾಷ್ಟ್ರಮಟ್ಟದಲ್ಲಿ ತಂಡವನ್ನು ಮುನ್ನಡೆಸಿ ಬಹುಮಾನ ಪಡೆದ ಅಸಾದುದ್ದೀನ್ ಸಲೀಂ, ಅಧ್ಯಯನ ವರದಿ ಮಂಡಿಸಿರುವ ಮುಹ್ಸಿನಾ ಖಾಲಿದ್ ನೀರಾಜೆ ಅವರನ್ನು ಗೌರವಿಸಲಾಯಿತು.

ಬಳಿಕ ಮುಕ್ರಿ ಕುಟುಂಬ ಸದಸ್ಯರುಗಳ ಬರಹ, ಚಿತ್ರಕಲೆ ಪ್ರದರ್ಶನ, ಪ್ರತಿಭಾ ಪುರಸ್ಕಾರ, ಪರಸ್ಪರ ಪರಿಚಯ, ಆಟೋಟ ಸ್ಪರ್ಧೆಗಳು ನಡೆದವು.

ವೇದಿಕೆಯಲ್ಲಿ ಕುಟುಂಬದ ವಿವಿಧ ಕೊಂಡಿಗಳ ಪ್ರತಿನಿಧಿಗಳಾಗಿ ಫಾರೂಕ್ ಮಂಜೇಶ್ವರ, ರಶೀದ್ ಸೂಫಿ, ಪೂಕುಂಞಿ ಅಬ್ದುಲ್ ರಹಿಮಾನ್, ಅಬೂಬಕರ್ ಕೆಎಸ್ಸಾರ್ಟಿಸಿ, ಮುಹಮ್ಮದಲಿ ರಾಮನಗರ, ರಾಫಿ ಸಾಬ್, ಮುಹಮ್ಮದ್ ಪೆದಮಲೆ, ಸಿರಾಜ್, ನಿಯಾಝ್, ಇಸ್ಮಾಯೀಲ್, ಕಪ್ಪಲ್ ಮೋನಾಕ, ಅಬ್ದುರ್ರಹ್ಮಾನ್ ಆತೂರು, ಆದಂ ಪುರುಷರಕಟ್ಟೆ, ಯೂಸುಫ್ ಕಬಕ, ಯೂಸುಫ್ ಜಿ.ಪಿ., ಅಝೀಝ್ ಪಾಣೆಮಂಗಳೂರು, ಶರೀಫ್ ಅಹ್ಮದ್, ಪಿ.ಎಸ್.ಅಬೂಬಕರ್, ಮುಹಮ್ಮದ್ ಪಿ.ಕೆ., ಮುಹಮ್ಮದ್ ಪೂರಿಂಗ, ನಝೀರ್ ಮರೀಲ್ ಉಪಸ್ಥಿತರಿದ್ದರು.

  ಅನಾಸ್ ಕಿರಾಅತ್ ಪಠಿಸಿದರು. ತಾಹ್ಸಿನಾ ಮತ್ತು ತಂಡದವರು ಸ್ವಾಗತ ಗೀತೆ ಹಾಡಿದರು. ಟ್ರಸ್ಟ್ ಉಪಾಧ್ಯಕ್ಷ ಸಿದ್ದೀಕ್ ನೀರಾಜೆ ಸ್ವಾಗತಿಸಿದರು. ಖಜಾಂಚಿ ಶಮೀಮ್ ಇಬ್ರಾಹೀಂ ವರದಿ ಮಂಡಿಸಿದರು. ಸಂಚಾಲಕ ಸಿದ್ದೀಕ್ ಉಪ್ಪಳ ವಂದಿಸಿದರು. ಕಾರ್ಯದರ್ಶಿ ಜಲೀಲ್ ಮುಕ್ರಿ ಕಾರ್ಯಕ್ರಮ ನಿರೂಪಿಸಿದರು.

ಟ್ರಸ್ಟ್ ಸಂಚಾಲಕರಾದ ಶಂಸುದ್ದೀನ್ ಉಪ್ಪಳ, ರಶೀದ್ ಐಡಿಯಲ್, ಹಬೀಬ್ ಐಡಿಯಲ್, ರವೂಫ್ ಉಸ್ಮಾನ್ ಮುಕ್ರಿ ಹಾಗೂ ಮುಹಮ್ಮದ್ ಅಲಿ ನೆಕ್ಕಿಲಾಡಿ, ಅಬ್ದುಲ್ ಫತ್ತಾಹ್, ನಶಾತ್ ಇಬ್ರಾಹೀಂ, ಮಂಝೀರ್ ಮರೀಲು, ಝಿಯಾದ್ ಗಂಡಿಬಾಗಿಲು, ತನ್ಸೀರಾ ಗಂಡಿಬಾಗಿಲು, ನಿಶಾ ರಶೀದ್, ಅಶ್ವಿರಾ ನೀರಾಜೆ, ಫರ್ಝಾನಾ ನೆಲ್ಯಾಡಿ, ಇರ್ಶಾನಾ ಕಲ್ಲರ್ಪೆ, ಫಿದಾ ಸಾಬಿರಾ, ಸಾಬಿರಾ ದಾವೂದ್, ಇರ್ಶಾನಾ ಹಮೀದ್, ನುಸೈಬಾ ಅಶೂರಾ, ಶಾಹಿದಾ, ಸಫೀದಾ, ನಫೀಸಾ ಮಿಶ್ರಿಯಾ, ಲತೀಫ್ ಇಳಂತಿಲ, ಸನ್ಮಾನ್ ಬಶೀರ್, ಸಿದ್ದೀಕ್ ಉಪ್ಪಳ ಮತ್ತಿತರರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News