ಮಂಗಳೂರು; ಚಿನ್ನ ಅಕ್ರಮ ಸಾಗಾಟದ ಐದು ಪ್ರಕರಣ ಪತ್ತೆ: ಒಟ್ಟು 3.64 ಕಿ.ಗ್ರಾಂ. ಚಿನ್ನ ವಶಕ್ಕೆ
Update: 2022-06-01 14:51 IST
ಬಜಪೆ, ಜೂ.1: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮೇ ತಿಂಗಳಲ್ಲಿ ಅಕ್ರಮ ಚಿನ್ನ ಸಾಗಾಟದ ಐದು ಪ್ರಕರಣಗಳನ್ನು ಬೇಧಿಸಿದ್ದಾರೆ.
ಪ್ರತ್ಯೇಕ ಐದು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು 24 ಕ್ಯಾರೆಟ್ ಪರಿಶುದ್ಧತೆಯ 3.64 ಕಿಲೋ ಗ್ರಾಂ ತೂಕದ 1.87 ಕೋ. ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಸಿದ್ದಾರೆ. ಪ್ರಕರಣಗಳಲ್ಲಿ ಒಟ್ಟು ಐದು ಮಂದಿಯನ್ನು ಬಂಧಿಸಿದ್ದಾರೆ.
ಹೆಚ್ಚಿನ ಪ್ರಕರಣದಲ್ಲಿ ಘನ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಗುದನಾಳ ಮತ್ತು ಒಳ ಉಡುಪುಗಳಲ್ಲಿ ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.