×
Ad

ಸುಳ್ಯದ ವಸಂತ್ ಕುಮಾರ್ ಅಪೆಕ್ಸ್ ಬ್ಯಾಂಕ್ ಜಿಎಂ

Update: 2022-06-01 22:41 IST
ವಸಂತ್ ಕುಮಾರ್

ಪುತ್ತೂರು; ಅಪೆಕ್ಸ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಹುದ್ದೆಗೆ ಮೊದಲ ಬಾರಿಗೆ ಕನ್ನಡದ ವ್ಯಕ್ತಿಯೊಬ್ಬರು ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರಮುಡ್ನೂರು ಗ್ರಾಮದ ಪೋನಡ್ಕ ನಿವಾಸಿ ವಸಂತ್ ಕುಮಾರ್ ಪಿ.ಪಿ ಅವರು ಕರ್ನಾಟಕ ರಾಜ್ಯದ ಅಪೆಕ್ಸ್ ಬ್ಯಾಂಕ್ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಪಡೆದಿದ್ದಾರೆ. ಅವರು ಪೋನಡ್ಕ ದಿ.ಪಿ.ಎಸ್.ಪರಮೇಶ್ವರಯ್ಯ ಹಾಗೂ ದಿ. ಸಾವಿತ್ರಿ ಪಿ.ಪಿ ದಂಪತಿಯ ಪುತ್ರ.

32 ವರ್ಷಗಳ ಹಿಂದೆ ಸಾಮಾನ್ಯ ಕ್ಲರ್ಕ್ ಕಮ್ ಕ್ಯಾಷಿಯರ್ ಆಗಿ ಅಪೆಕ್ಸ್ ಬ್ಯಾಂಕಿನಲ್ಲಿ ಕರ್ತವ್ಯ ಆರಂಭಿಸಿದ ಅವರು ಸತತ ಪರಿಶ್ರಮ ಹಾಗೂ ತಮ್ಮ ಪ್ರತಿಭೆಯ ಮೂಲಕ ಈ ಹಂತ ತಲುಪಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ವಸಂತ್ ಕುಮಾರ್ ವಿವಿ ನಡೆಸಿದ್ದ ಬಿಬಿಎಂ ಪರೀಕ್ಷೆಯಲ್ಲಿ (1987) ಏಳನೇ ರ್ಯಾಂಕ್ ಪಡೆದಿದ್ದರು. ಜೇನುಕೃಷಿ, ಚೆಸ್, ಮೊಬೈಲ್ ಫೋಟೊಗ್ರಫಿ, ಹನಿಗವನ ರಚನೆ, ಕೈತೋಟ ನಿರ್ಮಾಣ ಅವರ ನೆಚ್ಚಿನ ಹವ್ಯಾಸಗಳು. ತಾವು ಕರ್ತವ್ಯ ನಿರ್ವಹಿಸಿದ್ದ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿಯೂ ಕೈತೋಟ ನಿರ್ಮಿಸುವ ಮೂಲಕ ಮಾದರಿ ಕೆಲಸ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News