ನೀತಿಸಂಹಿತೆ ಉಲ್ಲಂಘನೆ: ಶಾಸಕ ಅನಿಲ್ ಬೆನಕೆ ವಿರುದ್ಧ ಕೋರ್ಟ್ ನಿಂದ ವಾರಂಟ್ ಜಾರಿ
Update: 2022-06-02 17:09 IST
ಬೆಂಗಳೂರು, ಜೂ.2: ವಿಧಾನಸಭಾ ಚುನಾವಣೆ ವೇಳೆ ನೀತಿಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ವಿರುದ್ಧ ಬೆಂಗಳೂರಿನ 42ನೆ ಎಸಿಎಂಎಂ ಕೋರ್ಟ್ ಜಾಮೀನುರಹಿತ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.
2018ರ ವಿಧಾನಸಭಾ ಚುನಾವಣೆ ವೇಳೆ ನೀತಿಸಂಹಿತೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅನಿಲ್ ಬೆನಕೆ ವಿರುದ್ಧ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. ಜೂನ್ 27ರಂದು ಶಾಸಕರನ್ನು ಹಾಜರುಪಡಿಸುವಂತೆ ವಾರಂಟ್ ಜಾರಿಗೊಳಿಸಲಾಗಿದೆ.