×
Ad

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದಲ್ಲಿ 'ಇನ್ವಿನ್ಸಿಯಾ-2022' ಸಾಂಸ್ಕೃತಿಕ ಮಹೋತ್ಸವ

Update: 2022-06-02 19:00 IST

ಬೆಂಗಳೂರು: ಮೇ 27 ಹಾಗೂ 28 ರಂದು ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದಲ್ಲಿ ಸಾಂಸ್ಕೃತಿಕ ಮಹೋತ್ಸವ 'ಇನ್ವಿನ್ಸಿಯಾ-2022' ವನ್ನು ಆಯೋಜಿಸಲಾಗಿತ್ತು. ಕುಲಪತಿಗಳಾದ ನಿಸ್ಸಾರ್ ಅಹಮದ್ ಮತ್ತು ಉಪಾಧ್ಯಕ್ಷರಾದ ಸಲ್ಮಾನ್ ಅಹಮದ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವು ನಡೆದಿದೆ. 

ʼPRK ಪ್ರೊಡಕ್ಷನ್ಸ್ & PRK ಆಡಿಯೋʼದ ನಿರ್ಮಾಪಕರು ಮತ್ತು ಪ್ರೆಸಿಡೆನ್ಸಿ ಸ್ಕೂಲ್ ಹಳೆ ವಿದ್ಯಾರ್ಥಿನಿ ಅಶ್ವಿನಿ ಪುನೀತ್ ರಾಜ್‌ ಕುಮಾರ್ ಅವರು 'ಇನ್ವಿನ್ಸಿಯಾ 22' ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಗಲಿದ ದಿವಂಗತ ನಟ ಡಾ.ಪುನೀತ್ ರಾಜ್‌ಕುಮಾರ್ ಅವರ ನೆನಪುಗಳನ್ನು ಸ್ಮರಿಸಿ, ಅವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಎಲ್ಲಾ ಪ್ರಮುಖ ಅಧಿಕಾರಿ ವರ್ಗದವರು, ಬೋಧಕ ಮತ್ತು ಬೋಧಕೇತರ ವರ್ಗದವರು ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಭಾರತಾದ್ಯಂತದ 90 ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ 2,100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ 50 ಕ್ಕೂ ಹೆಚ್ಚು ಪ್ರಕಾರದ ಸ್ಪರ್ಧೆಗಳಿಗೆ ನೋಂದಾಯಿಸಿಕೊಂಡಿದ್ದರು. ಒಟ್ಟು 20,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದ ಭಾಗವಾಗಿದ್ದರು. 

ಮೊದಲನೇ ದಿನದಂದು 'ಡಿವೈನ್ x ಗಲ್ಲಿ ಗ್ಯಾಂಗ್' ಪ್ರದರ್ಶನ ನೀಡಿದ್ದು, 2 ನೇ ದಿನದ ಕಾರ್ಯಕ್ರಮವನ್ನು ಜಾವೇದ್ ಅಲಿ ಅವರು ಉದ್ಘಾಟಿಸಿದರು.  ನೃತ್ಯ, ನಾಟಕ, ಸಂಗೀತ ಮತ್ತು ಲಲಿತಕಲೆಗಳ ಪ್ರಕಾರಗಳಲ್ಲಿ ಬೃಹತ್ ವೈವಿಧ್ಯಮಯ ಸ್ಪರ್ಧೆಗಳ ಮೂಲಕ ಕಾರ್ಯಕ್ರಮ ಆರಂಭವಾಯಿತು.  EMCTruth ಮತ್ತು ಅರ್ಜುನ್ (DJ ಕ್ವೇಕ್) ಪ್ರದರ್ಶನವನ್ನು ನೀಡಿದ್ದು, ಗಾಯಕಿ ಅನನ್ಯ ಬಿರ್ಲಾ ಅವರೂ ಪ್ರದರ್ಶನ ನೀಡಿದ್ದಾರೆ. 

ʼಇನ್ವಿನ್ಸಿಯಾ-22ʼ ರ ಸಮಗ್ರ ಚಾಂಪಿಯನ್‌ಶಿಪ್ ಅನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು ಪಡೆದುಕೊಂಡಿದ್ದು, ರನ್ನರ್ ಟ್ರೋಫಿಯನ್ನು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜು ಪಡೆದುಕೊಂಡಿದೆ. ಮೇಡಂ ಚಾನ್ಸೆಲರ್ ಕೌಸರ್ ಅಹಮದ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News