ಅವಧಿ ಮುಗಿದರೂ ವಾರ್ಡ್ ಪಟ್ಟಿ ಬಿಡುಗಡೆ ಮಾಡದ ಬಿಬಿಎಂಪಿ, ಹೊಸ ವಾರ್ಡ್‍ಗಳಿಗೆ RSS ನಾಯಕರ ಹೆಸರು?
ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪಠ್ಯಪುಸ್ತಕಗಳಲ್ಲಿ ಆರ್‍ಎಸ್‍ಎಸ್ ಅಜೆಂಡಾವನ್ನು ಸೇರಿಸಿ, ಕೇಸರಿಕರಣಗೊಳಿಸಲಾಗುತ್ತಿದೆ ಎಂಬ ವಿವಾದ ಭುಗಿಲೆದ್ದಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ವಾರ್ಡ್ ಪುನರ್ ವಿಂಗಡನೆ ಹೆಸರಿನಲ್ಲಿ ಹೊಸ ವಾರ್ಡ್‍ಗಳನ್ನು ಸೇರ್ಪಡೆ ಮಾಡಿ ಆರ್‍ಎಸ್‍ಎಸ್ ನಾಯಕರ ಹೆಸರನ್ನು ಸೇರಿಸುವ ಹನ್ನಾರ ನಡೆಯುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಹೊಸ ವಾರ್ಡ್‍ಗಳ ನಾಮಕರಣ ವಿಚಾರದಲ್ಲಿ ವಾರ್ಡ್ ಪುನರ್ ಪರಿಶೀಲನಾ ಸಮಿತಿಯ ಸದಸ್ಯ ಹಾಗೂ ಬಿಬಿಎಂಪಿಯ ಕಂದಾಯ ವಿಭಾಗದ ಆಯುಕ್ತ ದೀಪಕ್ ಅವರು ನೀಡಿರುವ ಸ್ಪಷ್ಟನೆಗಳು ಗೊಂದಲವನ್ನು ಸೃಷ್ಟಿಸಿದೆ.
ಈಗಾಗಲೇ ಬಿಬಿಎಂಪಿ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ವಿಂಗಡಿಸಿ ವಾರ್ಡ್‍ಪಟ್ಟಿಯನ್ನು ನಗರಾಭಿವೃದ್ಧಿಗೆ ಸಲ್ಲಿಸಿತ್ತು, ಆದರೆ ಇಲಾಖೆಯು ಅದರಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಸಲ್ಲಿಸುವಂತೆ ಶಿಫಾರಸ್ಸು ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ವಾರ್ಡ್‍ಗಳ ಹೆಸರನ್ನು ಬಹಿರಂಗಪಡಿಸದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದಲ್ಲದೇ ಆರ್‍ಎಸ್‍ಎಸ್ ಸೇರಿದಂತೆ ಬಿಜೆಪಿ ಮುಖಂಡರು ವಾರ್ಡ್ ಪುನರ್ ವಿಂಗಡನೆ ಸಮಿತಿಯನ್ನು ಭೇಟಿ ಮಾಡಿರುವ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಿಬಿಎಂಪಿ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಹೊಂದಿದ ವಾರ್ಡ್‍ಗಳನ್ನು ತಮ್ಮದಾಗಿಸಿಕೊಳ್ಳಲು ಬಿಜೆಪಿ ಹೊಸ ವಾರ್ಡ್‍ಗಳನ್ನು ವಿಂಗಡಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಈಗಾಗಲೇ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಚುನಾವಣೆಯನ್ನು ನಡೆಸುವಂತೆ ತೀರ್ಪು ನೀಡಿದೆ. ಹಾಗಾಗಿ ಹೊಸ ವಾರ್ಡ್‍ಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ರಾಜಕೀಯ ಪಕ್ಷಗಳು ಸೇರಿ ಸಾರ್ವಜನಿಕರು ಒತ್ತಡ ಹೇರುತ್ತಿದ್ದಾರೆ. ಚುನಾವಣೆಯ ಸಿದ್ಧತೆ ಮತ್ತು ಹೊಸ ವಾರ್ಡ್‍ಗಳ ವಿಂಗಡಣೆ ಬಿಬಿಎಂಪಿಗೆ ತಲೆನೋವಾಗಿ ಪರಿಣಮಿಸಿದೆ.
ವಾರ್ಡ್‍ಗಳಿಗೆ ಆರೆಸ್ಸೆಸ್ ಹೆಸರುಗಳನ್ನು ಇಡಲು ಯಾವುದೇ ಸೂಚನೆಗಳು ಬಂದಿಲ್ಲ. 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ವಿಂಗಡಿಸುವಾಗ, ಹೊಸ ವಾರ್ಡ್‍ಗಳಿಗೆ ನಾಮಕರಣ ಮಾಡುವುದು ಅನಿವಾರ್ಯವಾಗಿದೆ. ಆದರೆ ಯಾವುದೇ ಸಂಘವು ವಾರ್ಡ್ ವಿಂಗಡಣಾ ಸಮಿತಿಗೆ ಹೆಸರು ಇಡಲು ಶಿಫಾರಸ್ಸು ಮಾಡಿಲ್ಲ. ಆರ್‍ಎಸ್‍ಎಸ್‍ನ ಹೆಡ್ಗೆವಾರ್, ಸಾವರ್ಕರ್ ಹೆಸರನ್ನು ವಾರ್ಡ್‍ಗಳಿಗೆ ಇಟ್ಟಿಲ್ಲ.
-ದೀಪಕ್, ಬಿಬಿಎಂಪಿಯ ಕಂದಾಯ ವಿಭಾಗದ ಆಯುಕ್ತ