×
Ad

ಚಡ್ಡಿಗೆ ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ, ಹುಷಾರ್: ಸಿದ್ದರಾಮಯ್ಯರಿಗೆ ಈಶ್ವರಪ್ಪ ಎಚ್ಚರಿಕೆ

Update: 2022-06-04 13:38 IST

ಬೆಂಗಳೂರು, ಜೂ.4: ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಿವಾಸದ ಎದುರು ಎನ್ನೆಸ್ ಯುಐ ಕಾರ್ಯಕರ್ತರು ಚಡ್ಡಿ ಸುಟ್ಟು ಪ್ರತಿಭಟನೆ ಮಾಡಿದ್ದನ್ನು ಸಮರ್ಥಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.

"ಆರೆಸ್ಸೆಸ್ ತಂಟೆಗೆ ಬರಬೇಡಿ, ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ ಹುಷಾರ್'' ಎಂದು ಈಶ್ವರಪ್ಪ ಎಚ್ಚರಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಈಶ್ವರಪ್ಪ, "ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ... ಲಂಕೆಯೇ ಸುಟ್ಟು ಹೋಯಿತು... ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ, ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ... ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯ ... ಚಡ್ಡಿಗೆ ನೀವು ಬೆಂಕಿ ಹಚ್ಜಿ ನೋಡಿ ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರೆಸ್ಸೆಸ್ ತಂಟೆಗೆ ಬರಬೇಡಿ… ಹುಷಾರ್" ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿಭಟನೆ ವೇಳೆ ಎನ್ನೆಸ್ ಯುಐ ಕಾರ್ಯಕರ್ತರು ಚಡ್ಡಿ ಸುಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದ ಸಿದ್ದರಾಮಯ್ಯ, "ಚಡ್ಡಿ ಸುಟ್ಟಿದ್ದು ಸಾಂಕೇತಿಕ ಪ್ರತಿಭಟನೆ" ಎಂದಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News