ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ಗೆ ಆಯ್ಕೆ

Update: 2022-06-05 15:53 GMT
ಬಿ.ಕೆ ಇಮ್ತಿಯಾಝ್

ಚಿತ್ರದುರ್ಗ, ಜೂ.೫ : ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ನ ೫ನೇ ರಾಜ್ಯ ಸಮ್ಮೇಳನ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ದಲ್ಲಾಳರ ಸಭಾಭವನದಲ್ಲಿ ರವಿವಾರ ಜರಗಿತು.

ರಾಜ್ಯದ ವಿವಿಧ ಎಪಿಎಂಸಿ, ಆಯಿಲ್, ರೈಸ್‌ಮಿಲ್‌ಗಳು , ವೇರ್‌ಹೌಸ್, ಸರಕಾರಿ ಆಹಾರ ಉಗ್ರಾಣ, ರೈಲ್ವೆ ಗೂಡ್‌ಶೆಡ್ ಮತ್ತು ಪಾನೀಯ ನಿಗಮಗಳಲ್ಲಿರುವ ಹಮಾಲಿ ಸಂಘಗಳ ಪದಾಧಿಕಾರಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಮುಂದಿನ ೪ ವರ್ಷದ ಅವಧಿಗೆ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ ರಾಗಿ ಕೆ ಮಹಾಂತೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಪತ್ತಾರ್ ಪುನರಾಯ್ಕೆಯಾದರು. ರಾಜ್ಯ ಕಾರ್ಯ ದರ್ಶಿಯಾಗಿ ಬಿ.ಕೆ. ಇಮ್ತಿಯಾಝ್ ಆಯ್ಕೆಯಾದರು.

ಮಂಗಳೂರಿನಲ್ಲಿ ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕಳೆದ ೧೨ ವರ್ಷಗಳಿಂದ ಹಳೇ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಪರವಾಗಿ ಸಂಘಟನೆ ಮತ್ತು ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಇಮ್ತಿಯಾಝ್‌ಗೆ ರಾಜ್ಯದ ವಿವಿಧ ಎಪಿಎಂಸಿಯಲ್ಲಿನ ಹಮಾಲಿ ಕಾರ್ಮಿಕರ ಸಂಘಟನೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಬಂದರು ಶ್ರಮಿಕರ ಸಂಘದ ಸಹ ಕಾರ್ಯದರ್ಶಿ ಹರೀಶ್ ಕೆರೆಬೈಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News