ಶ್ರೀ ದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಶ್ರೀದೇವಿ ಸಂಭ್ರಮ್ ಕಾರ್ಯಕ್ರಮ

Update: 2022-06-06 15:17 GMT

ಮಂಗಳೂರು : ನಗರದ ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಘಟಕವಾದ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವತಿಯಿಂದ ಎಚೆಲಾನ್ ೨೨ರ ಸಹಯೋಗದೊಂದಿಗೆ ಪದವಿಪೂರ್ವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವ ‘ಶ್ರೀ ದೇವಿ ಸಂಭ್ರಮ್-೨೨’ ಕಾರ್ಯಮವು ರವಿವಾರ ಕೆಂಜಾರಿನ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ನಿಧೀಶ ಎಸ್. ಶೆಟ್ಟಿ, ಮೈನಾ ಎಸ್.ಶೆಟ್ಟಿ, ಪ್ರಿಯಾಂಕ ಎನ್ ಶೆಟ್ಟಿ ಶುಭ ಹಾರೈಸಿದರು.

ಪ್ರಾಂಶುಪಾಲ ಮತ್ತು ನಿರ್ದೇಶಕ ಡಾ.ಕೆ.ಇ. ಪ್ರಕಾಶ್ ಸ್ವಾಗತಿಸಿದರು. ಸಂಚಾಲಕ ಪ್ರೊ. ಹರ್ಷ ಜಿ.ಒ ಮತ್ತು ಡಾ.ಗಾಯತ್ರಿ ಜೆ ಬಾಬು, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News