×
Ad

ಉಳ್ಳಾಲ: ಸೈಯದ್ ಮುಹಮ್ಮದ್ ಸಲೀಂ ತಂಙಳ್ ನಿಧನ

Update: 2022-06-07 14:05 IST

ಮಂಗಳೂರು, ಜೂ.7: ಉಳ್ಳಾಲ ಅಳೇಕಲದ ಜಾರ ಹೌಸ್ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಙಳ್ (31) ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಅವಿವಾಹಿತರಾಗಿದ್ದರು‌. ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವಾರ್ತಾಭಾರತಿ ಪತ್ರಿಕೆಯ ಮಾಜಿ‌ ಉದ್ಯೋಗಿಯಾಗಿದ್ದ ಇವರು ಬೈಕ್ ರೈಡರ್ ಆಗಿದ್ದರು. ದೇಶ, ವಿದೇಶಗಳಿಗೆ ಬುಲೆಟ್‌ನಲ್ಲೇ ಸಾವಿರಾರು ಕಿ.ಮೀ. ಏಕಾಂಗಿಯಾಗಿ ಸಂಚರಿಸಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News