‘ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ?': ಸಚಿವ ಸುನಿಲ್ ಕುಮಾರ್ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ
ಬೆಂಗಳೂರು, ಜೂ. 7: ‘ಅಂದು ಮನುಷ್ಯರಲ್ಲಿ ದಲಿತ, ಮೇಲ್ವರ್ಗ ಎಂದು ವಿಂಗಡಿಸಿದ್ದಿರಿ. ಈಗ ದಲಿತರಲ್ಲಿ ಸಾಮಾನ್ಯ ದಲಿತ, ಅಸಾಮಾನ್ಯ ದಲಿತ ಎಂದು ವಿಂಗಡಿಸುತ್ತಿದ್ದೀರಿ. ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ?' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ನಾನೂ ಸಾಮಾನ್ಯನೇ, ಅಸಾಮಾನ್ಯನೆಂಬ ಯಾವ ಭ್ರಮೆಯೂ ನನಗಿಲ್ಲ. ನನ್ನ ಕುಟುಂಬವೂ ಸಾಮಾಜಿಕ ಶೋಷಣೆಯನ್ನು ಅನುಭವಿಸಿದೆ. ನನ್ನ ಕ್ಷೇತ್ರದ ಜನತೆ ಹಾಗೂ ನನ್ನ ಪಕ್ಷ ಏನು ನಿರ್ದೇಶಿಸುತ್ತಾರೊ ಅದರಂತೆ ನಾನು ನಡೆಯುತ್ತೇನೆ. ಆದರೆ, ನಿಮ್ಮ ಪಕ್ಷದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ನಾರಾಯಣಸ್ವಾಮಿ, ಪ್ರಭು ಚೌಹಾಣ್ ಹಾಗು ಇನ್ನಿತರ ದಲಿತರ ಬದಲು ಬಡ ದಲಿತರಿಗೆ ಟಿಕೆಟ್ ನೀಡುವುದು ಯಾವಾಗ?' ಎಂದು ತಿರುಗೇಟು ನೀಡಿದ್ದಾರೆ.
‘ನಿಮ್ಮ ಸಲಹೆಯಂತೆ ನಿಮ್ಮ ಪಕ್ಷ ಮಾದರಿಯಾಗಿ ಈ ನಿರ್ಣಯ ಕೈಗೊಳ್ಳಲಿ. ಒಂದೊಂದು ಕಡೆ ಒಂದೊಂದು ಸಮುದಾಯದ ಹೆಸರಿನಲ್ಲಿ ಗುರುತಿಸಿಕೊಳ್ಳುವ ತಾವೂ ಸೇರಿದಂತೆ ಸಿಎಂ ಬಸವರಾಜ ಬೊಮ್ಮಾಯಿಯವರವರೆಗೂ ಆಯಾ ಸಮುದಾಯದ ಬಡವರಿಗೆ ಕ್ಷೇತ್ರ ಬಿಟ್ಟುಕೊಟ್ಟಾಗ, ಎಲ್ಲರಿಗೂ ನೀವು ಮಾದರಿಯಾದಾಗ ನಾನೂ ನಿಮ್ಮನ್ನು ಗೌರವಿಸುತ್ತೇನೆ. ಅಗಬಹುದೇ? ಈ ಪ್ರಸ್ತಾಪವನ್ನು ನಿಮ್ಮ ಪಕ್ಷದ ಮುಂದಿಡುವ ಧೈರ್ಯವಿದೆಯೇ ಸುನಿಲ್ ಕುಮಾರ್ ಅವರೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಅಂದು ಮನುಷ್ಯರಲ್ಲಿ ದಲಿತ, ಮೇಲ್ವರ್ಗ ಎಂದು ವಿಂಗಡಿಸಿದ್ದಿರಿ. ಈಗ ದಲಿತರಲ್ಲಿ ಸಾಮಾನ್ಯ ದಲಿತ, ಅಸಾಮಾನ್ಯ ದಲಿತ ಎಂದು ವಿಂಗಡಿಸುತ್ತಿದ್ದೀರಿ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) June 6, 2022
ಎಷ್ಟಾದರೂ ವಿಂಗಡಿಸುವುದೇ ನಿಮ್ಮ ಪರಂಪರೆಯಲ್ಲವೇ?
ನಾನೂ ಸಾಮಾನ್ಯನೇ, ಅಸಾಮಾನ್ಯನೆಂಬ ಯಾವ ಭ್ರಮೆಯೂ ನನಗಿಲ್ಲ.
ನನ್ನ ಕುಟುಂಬವೂ ಸಾಮಾಜಿಕ ಶೋಷಣೆಯನ್ನು ಅನುಭವಿಸಿದೆ.
1/3 https://t.co/GqbeS8FVP0