ನವಭಾರತ ಶಾಲೆಯ ಸಂಸ್ಥಾಪಕ ಹಾಜಿ ಖಾಲಿದ್ ಮುಹಮ್ಮದ್ ರ ಜನ್ಮಶತಾಬ್ದಿ ಸಮಾರಂಭ

Update: 2022-06-07 17:26 GMT

ಮಂಗಳೂರು: ನಗರದ ಪ್ರಥಮ ರಾತ್ರಿ ಶಾಲೆಯಾದ ನವಭಾರತ ರಾತ್ರಿ ಪ್ರೌಢಶಾಲೆ ಹಾಜಿ ಖಲೀದ್‌ ಮಹಮದ್‌ ರವರಿಂದ 1943ನೇ ಮಾರ್ಚ್ 15ರಂದು ಸ್ಥಾಪನೆಗೊಂಡಿದೆ. ಅವರು ಸ್ಥಾಪಿಸಿದ ಈ ಶಾಲೆ 80ನೆ  ವರ್ಷಾಚರಣೆಯ ಸಂಭ್ರಮ ಹಾಗೂ ಸಂಸ್ಥಾಪಕರ ಜನ್ಮ ಶತಾಬ್ದಿ ಕಾರ್ಯಕ್ರಮ ಈ ವರ್ಷ ನಡೆಯಲಿದೆ.

ಆ ಪ್ರಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ನವಭಾರತ ವಿಜ್ಯುಕೇಶನ್ ಸೊಸೈಟಿ (ರಿ)ಯು ವರ್ಷ ಪೂರ್ತಿ ಈ ಸಂಭ್ರಮಾಚರಣೆಯನ್ನು ನಗರದ ಬೇರೆ ಬೇರೆ ಕಡೆಗಳಲ್ಲಿ ಆಚರಿಸಲು ನಿಶ್ಚಯಿಸಿದೆ ಎಂದು ನವಭಾರತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ವಾಮನ ಶೆಣೈ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಗೋಷ್ಠಿಯಲ್ಲಿ ನವಭಾರತ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಎಂ. ರಾಮಚಂದ್ರ, ಖಚಾಂಚಿ ಮಧುಸೂದನ್‌ ಅಯಾರ್, ಸಂಸ್ಥಾಪಕರ ಪುತ್ರರಾದ ಡಾ| ಅಬ್ದುಲ್ ನಾಸಿರ್, ಶಾಲಾ ಮುಖ್ಯೋಪಾಧ್ಯಾಯರಾದ ವರ್ಕಾಡಿ ರವಿ ಆವೂರಾಯ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News