×
Ad

ಹಿಂದೂ ರಕ್ಷಕ ಮುಖವಾಡದ ಬಿಜೆಪಿ ನಾಯಕರಿಗೆ ಕಾಶ್ಮೀರದ ಹಿಂದೂಗಳ ಆರ್ತನಾದ ಕೇಳುತ್ತಿಲ್ಲ: ದಿನೇಶ್ ಗುಂಡೂರಾವ್

Update: 2022-06-08 12:08 IST

ಬೆಂಗಳೂರು, ಜೂ.8: ಆದರೂ ಹಿಂದೂ ರಕ್ಷಕ ಮುಖವಾಡದ ಬಿಜೆಪಿ ನಾಯಕರಿಗೆ ಕಾಶ್ಮೀರದ ಹಿಂದೂಗಳ ಆರ್ತನಾದ ಕಿವಿಗೆ ಬೀಳುತ್ತಿಲ್ಲ. ಇದು ಬಿಜೆಪಿಯ ನಕಲಿ ಹಿಂದೂ ಪ್ರೇಮ ಅಲ್ಲವೇ.? ಎಂದು ಕಾಂಗ್ರಸ್ ಮುಖಂಡ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯೆಗಳ ಕುರಿತಂತೆ ಟ್ಟೀಟ್ ಮೂಲಕ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, "ಹಿಂಸೆಯ ಗೂಡಾಗಿರುವ ಕಾಶ್ಮೀರದಲ್ಲಿ ಹಿಂದೂಗಳ‌ ಹತ್ಯೆ ಅವ್ಯಾಹತವಾಗಿದೆ. ಉಗ್ರರ ಟಾರ್ಗೆಟ್ ಆಗಿರುವ ಕಾಶ್ಮೀರದ ಹಿಂದೂಗಳು ಪ್ರಾಣಭಯದಿಂದ ಕಣಿವೆ ತೊರೆಯುತ್ತಿದ್ದಾರೆ. ಆದರೂ ಹಿಂದೂ ರಕ್ಷಕ ಮುಖವಾಡದ ಬಿಜೆಪಿ ನಾಯಕರಿಗೆ ಕಾಶ್ಮೀರದ ಹಿಂದೂಗಳ ಆರ್ತನಾದ ಕಿವಿಗೆ ಬೀಳುತ್ತಿಲ್ಲ. ಇದು ಬಿಜೆಪಿಯ ನಕಲಿ ಹಿಂದೂ ಪ್ರೇಮ ಅಲ್ಲವೇ.?" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News