BBMP ವಾರ್ಡ್ ಮರು ವಿಂಗಡಣೆ: ಗುರುವಾರ ವರದಿ ಸಲ್ಲಿಕೆ

Update: 2022-06-08 11:56 GMT

ಬೆಂಗಳೂರು, ಜೂ.8: ವಾರ್ಡ್ ಮರುವಿಂಗಡನಾ ಸಮಿತಿ ಬಿಬಿಎಂಪಿ ವಾರ್ಡ್ ಮರು ವಿಂಗಡನೆ ವರದಿಯನ್ನು ರಾಜ್ಯ ಸರಕಾರಕ್ಕೆ ನಾಳೆ (ಜೂ.9) ಸಲ್ಲಿಕೆ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಬುಧವಾರ ನಗರದ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಾರ್ಡ್ ವಿಂಗಡಣೆ ಸಂಬಂಧ ಸಮಿತಿ ಸದಸ್ಯರು ಇಂದು ನಗರಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಕೆ ಮಾಡಲಿದ್ದಾರೆ. ಇದರಲ್ಲಿ ಕೆಲ ದಾಖಲೆ ಸೇರಿಸಲಾಗಿದ್ದು, ಎರಡು ಭಾಗಗಳಲ್ಲಿ ಈ ವರದಿಯ ಅಂಶ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ನೀಡಿದರು.

ಏನಿದು ವರದಿ?: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ 198 ವಾರ್ಡ್‍ಗಳನ್ನು 243 ವಾರ್ಡ್‍ಗಳಾಗಿ ಮರುವಿಂಗಡನೆ ಹಾಗೂ ಪ್ರತಿ ವಾರ್ಡ್‍ಗೆ 30ರಿಂದ 35 ಸಾವಿರ ಮತದಾರರನ್ನು ಒಳಗೊಂಡಂತೆ ವಿಂಗಡನೆ ಕುರಿತು ವರದಿಯಲ್ಲಿದೆ.

ಅಲ್ಲದೆ, 8 ವಾರಗಳ ಒಳಗಾಗಿ ಚುನಾವಣೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಬಿಬಿಎಂಪಿಗೆ ಹೇಳಿದೆ. ಆ ಹಿನ್ನೆಲೆಯಲ್ಲಿ ಒಂದಿಲ್ಲೊಂದು ತಯಾರಿ ಮಾಡಿಕೊಳ್ಳುತ್ತಿರುವ ಬಿಬಿಎಂಪಿ, ವಾರ್ಡ್ ಮರು ವಿಂಗಡಣೆ ಕರಡು ಸಿದ್ಧಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News